ಮಂಜೇಶ್ವರ: ಮಗುಚಿ ಬಿದ್ದ ಬಸ್, 15ಕ್ಕೂ ಹೆಚ್ಚು ಮಂದಿಗೆ ಗಾಯ

Prasthutha|

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಬಸ್ಸೊಂದು ರಸ್ತೆ ಬದಿ ಮಗುಚಿ ಬಿದ್ದ ಘಟನೆ ಇಂದು ಸಂಜೆ ಮಂಜೇಶ್ವರ ಸಮೀಪದ ಪೊಸೊಟ್ ಎಂಬಲ್ಲಿ ನಡೆದಿದೆ.

- Advertisement -

ಅಪಘಾತದಿಂದ 15 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ.

ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಕೇರಳ ಮಲಬಾರ್ ಬಸ್ ಪೊಸೋಟ್ ಪೆಟ್ರೋಲ್ ಪಂಪ್ ಬಳಿ ಪಲ್ಟಿಯಾಗಿದೆ.

- Advertisement -

ಬಸ್ ನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. 15ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ವಿವಿಧ ಅಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Join Whatsapp