ಉತ್ತರಾಖಂಡದಲ್ಲಿ ಹಿಮಪಾತ: 28 ಮಂದಿ ಮಂಜಿನಡಿ ಸಿಲುಕಿರುವ ಸಾಧ್ಯತೆ

Prasthutha|

ನವದೆಹಲಿ: ಉತ್ತರಾಖಂಡದ ದ್ರೌಪದಿ ದಂಡ- 2 ಪರ್ವತ ಶ್ರೇಣಿಯಲ್ಲಿ ಹಿಮಪಾತ ಉಂಟಾದುದರಿಂದ ಕನಿಷ್ಠ 28 ಜನರು ಹಿಮದೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಮಂಗಳವಾರ ಹೇಳಿದ್ದಾರೆ.

- Advertisement -

 ಸಂರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಎಲ್ಲರೂ ಮಹಿಳೆಯರಾಗಿದ್ದು ಉತ್ತರ ಕಾಶಿಯ ನೆಹರೂ ಪರ್ವತಾರೋಹಣ ಇನ್ ಸ್ಟಿಟ್ಯೂಟ್ ನವರಾಗಿದ್ದಾರೆ. ಉತ್ತರಾಖಂಡದ ಗಡ್ವಾಲ್ ಹಿಮಾಲಯಾದ ಗಂಗೋತ್ರಿ ವಲಯದಲ್ಲಿ ಈ ಪರ್ವತಗಳಿವೆ.

“ಜಿಲ್ಲಾಡಳಿತದಿಂದ ಕ್ಷಿಪ್ರ ಕಾರ್ಯಾಚರಣೆ ಮುಂದುವರಿದಿದೆ. ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್, ಸೇನೆ ಮತ್ತು ಐಟಿಬಿಪಿ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಎನ್ ಐಎಂ ತರಬೇತಿ ತಂಡವೂ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದೆ. ದ್ರೌಪದಿ ದಂಡ 2 ಎಂಬ ಪರ್ವತ ಕೋಡಿನ ಬಳಿ ಈ ಹಿಮಪಾತ ನಡೆದಿದೆ” ಎಂದು ದಾಮಿ ಟ್ವೀಟ್ ಮಾಡಿದ್ದಾರೆ.

- Advertisement -

“ನಾನು ಭಾರತೀಯ ವಾಯು ಪಡೆಯವರಿಗೆ ಕೂಡಲೇ ರಕ್ಷಕ ವಿಮಾನದೊಂದಿಗೆ ಅಲ್ಲಿಗೆ ಹೋಗುವಂತೆ ಆದೇಶಿಸಿದ್ದೇನೆ” ಎಂದು ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.



Join Whatsapp