ಪರೇಶ್ ಮೇಸ್ತಾ ಸಾವು ಆಕಸ್ಮಿಕ | ದ್ವೇಷ ಭಾಷಣ, ಗಲಭೆಕೋರರ ಮೇಲೆ UAPA ಯಾವಾಗ ಹಾಕುತ್ತೀರಾ: ರಿಯಾಝ್ ಕಡಂಬು

Prasthutha|

ಬೆಂಗಳೂರು: ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು CBI ವರದಿ ನೀಡಿದೆ. ಅಂದು ಬಿಜೆಪಿಯ ದ್ವೇಷ ಭಾಷಣ ಹಾಗೂ  ಸಂಘಪರಿವಾರ ನಡೆಸಿದ  ಗಲಭೆಯ ಬಗ್ಗೆ UAPA ಕೇಸ್ ಯಾವಾಗ ಹಾಕುತ್ತೀರಾ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿದ ಅವರು, IG ಅವರ ಕಾರು ಹೊತ್ತಿ ಉರಿಯುವ ದೃಶ್ಯ ಈಗಲೂ ಕಣ್ಣೆದುರಿಗೆ ಬರುತ್ತಿದೆ. ಸಿದ್ದರಾಮಯ್ಯ ಸರಕಾರವಿತ್ತು. ಮುಸ್ಲಿಮರ ಮನೆ ಅಂಗಡಿಗಳನ್ನು ಹುಡುಕಿ ಹುಡುಕಿ ಬೆಂಕಿ ಹಚ್ಚಲಾಗಿತ್ತು. ಇವತ್ತು ಸಿಬಿಐ ಪರೇಶ್ ಮೇಸ್ತಾ ಸಾವು ಆಕಸ್ಮಿಕ ಎಂದಿದೆ. ಅಂದು BJP/RSSನ ದ್ವೇಷ ಭಾಷಣ ಗೈದ ನಾಯಕರ, ಗಲಭೆಕೋರರ ಮೇಲೆ UAPA ಯಾವಾಗ ಹಾಕುವುದು ಎಂದು ಪ್ರಶ್ನಿಸಿದ್ದಾರೆ.

ಉತ್ತರ ಕನ್ನಡದ ಹೊನ್ನಾವರದಲ್ಲಿ 2017ರಲ್ಲಿ ಯುವಕ ಪರೇಶ ಮೇಸ್ತ ಸಾವು ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು, ಪರೇಶ್ ಮೇಸ್ತಾ  ಎಂಬ ಯುವಕನನ್ನು ಯಾರೂ ಕೊಲೆ ಮಾಡಿಲ್ಲ.ಅದು ಆಕಸ್ಮಿಕ ಸಾವು ಎಂದು  ಸಿಬಿಐ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

- Advertisement -

ನಾಲ್ಕು ವರ್ಷಕ್ಕೂ ಅಧಿಕ ಕಾಲ ತನಿಖೆ ನಡೆಸಿದ ಸಿ.ಬಿ.ಐ ಅಧಿಕಾರಿಗಳು, ಸುಮಾರು 1,500 ಪುಟಗಳ ವರದಿಯನ್ನು ಹೊನ್ನಾವರದ ನ್ಯಾಯಾಲಯಕ್ಕೆ ಭಾನುವಾರ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯವು ಸೋಮವಾರ ಸ್ವೀಕೃತಗೊಳಿಸಿದೆ. ಮುಂದಿನ ವಿಚಾರಣೆಯನ್ನು ನ.16ಕ್ಕೆ ಮುಂದೂಡಿದೆ.

Join Whatsapp