ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ಮಾಡುವ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ಮಾತ್ರ ಇದೆ: ಜೈರಾಮ್ ರಮೇಶ್

Prasthutha|

- Advertisement -

ಗುಂಡ್ಲುಪೇಟೆ: ಚುನಾವಣೆ ಮೂಲಕ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ವ್ಯವಸ್ಥೆ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ. ಗುರುತಿನ ಚೀಟಿ ಮೂಲಕವೇ ಚುನಾವಣೆ ನಡೆಯುತ್ತದೆ ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಬಗ್ಗೆ ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು, ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ನಮ್ಮಲ್ಲಿ ಮಾತ್ರ ಇದೆ. ಬೇರೆ ಪಕ್ಷದಲ್ಲಿ ಎಲೆಕ್ಷನ್ ಇಲ್ಲ. ನಮ್ಮ ಪಾರ್ಟಿಯಲ್ಲಿ ಸಿಸ್ಟಮ್ ಇದೆ. ಮಲ್ಲಿಕಾರ್ಜುನ್ ಖರ್ಗೆ ಆದ್ರೂ ಆಗಲಿ, ಶಶಿ ತರೂರ್ ಆದ್ರೂ ಆಗಲಿ. ನಮಗೆ ಚುನಾವಣೆ ‌ಸಂಜೀವಿನಿ ಅಲ್ಲ, ಭಾರತ್ ಜೋಡೊ ಯಾತ್ರೆಯೇ ಸಂಜೀವಿನಿ ಎಂದರು.‌




Join Whatsapp