ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರಿ ಕೆಲಸದ ಭರವಸೆ ಕೊಟ್ಟ ರಾಹುಲ್​ ಗಾಂಧಿ

Prasthutha|

- Advertisement -

ಚಾಮರಾಜನಗರ: ಭಾರತ್ ಜೋಡೋ ಯಾತ್ರೆಯ ನಡುವೆ ರಾಹುಲ್ ಗಾಂಧಿ‌ ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವ ಭರವಸೆ ನೀಡಿದ್ದಾರೆ.

ಆಮ್ಲಜನಕ ದುರಂತದ ಸಂತ್ರಸ್ತರು ಅಂದು ನಡೆದ ಕರುಣಾಜನಕ ಕಥೆಗಳನ್ನು ರಾಹುಲ್ ಗಾಂಧಿ ಮುಂದೆ ತೆರೆದಿಟ್ಟರು, ಕೊರೊನಾದಿಂದಲೇ ಸತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ ಇದು ಮೊದಲು ಸರಿಯಾಗಬೇಕು. ಮೃತಪಟ್ಟವರ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು ಎಂಬ ಸಂತ್ರಸ್ತರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಹುಲ್ ಗಾಂಧಿ ತಮ್ಮ ಸರ್ಕಾರ ಬಂದ ಕೂಡಲೇ ಮೊದಲ ಕೆಲಸ ಸಂತ್ರಸ್ತ ಕುಟುಂಬಗಳಿಗೆ ನೌಕರಿ ಕೊಡಿಸುವುದಾಗಿದೆ ಹೇಳಿದ್ದಾರೆ.

Join Whatsapp