ಟಿ20| ವಿರಾಟ್‌ ಕೊಹ್ಲಿ ದಾಖಲೆ ಸರಿಗಟ್ಟಿದ ಬಾಬರ್‌ ಅಝಮ್‌

Prasthutha|

ಕರಾಚಿ: ​​​​​​​ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿಯ ಮತ್ತೊಂದು ದಾಖಲೆಯನ್ನು ಪಾಕಿಸ್ತಾನದ ನಾಯಕ ಬಾಬರ್‌ ಅಝಮ್‌ ಸರಿಗಟ್ಟಿದ್ದಾರೆ.

- Advertisement -

ಕರಾಚಿಯಲ್ಲಿ ನಡೆದ  ಇಂಗ್ಲೆಂಡ್‌ ವಿರುದ್ಧದ 6ನೇ ಟಿ20 ಪಂದ್ಯದಲ್ಲಿ ಇನ್ನಿಂಗ್ಸ್‌ ಆರಂಭಿಸಿದ್ದ  ಬಾಬರ್‌ 87 ರನ್‌ಗಳಿಸಿ ಅಜೇರಾಗುಳಿದಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 3000 ರನ್‌ ಪೂರ್ತಿಗೊಳಿಸಿದ ವಿರಾಟ್‌ ಕೊಹ್ಲಿ ದಾಖಲೆಯನ್ನು ಸಮದೂಗಿಸಿದ್ದಾರೆ.  ಕೊಹ್ಲಿ ಮತ್ತು ಬಾಬರ್‌ ತಲಾ 81 ಇನ್ನಿಂಗ್ಸ್‌ಗಳಲ್ಲಿ  3000 ರನ್‌ ಮೈಲಿಗಲ್ಲು ತಲುಪಿದ್ದಾರೆ. ಅದಾಗಿಯೂ ಕೊಹ್ಲಿ, ಪಾಕ್‌ ನಾಯಕನಿಗಿಂತಲೂ ಉತ್ತಮ ಸ್ಟ್ರೈಕ್‌ ರೇಟ್‌ ಮತ್ತು  ಸರಾಸರಿಯನ್ನು ಹೊಂದಿದ್ದಾರೆ.

ಅತಿ ವೇಗವಾಗಿ 3000 ರನ್‌ ಪೂರ್ತಿಗೊಳಿಸಿದ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (101 ಇನ್ನಿಂಗ್ಸ್‌), ರೋಹಿತ್‌ ಶರ್ಮಾ (140 ಇನ್ನಿಂಗ್ಸ್‌), ಹಾಗೂ ಐರಿಶ್‌ ಕ್ರಿಕೆಟರ್ ಪೌಲ್‌ ಸ್ಟರ್ಲಿಂಗ್‌ (113 ಇನ್ನಿಂಗ್ಸ್‌) ನಂತರದ ಸ್ಥಾನದಲ್ಲಿದ್ದಾರೆ.

- Advertisement -

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ  ವಿರಾಟ್‌ ಕೊಹ್ಲಿ ಮಾತ್ರ  50ಕ್ಕಿಂತಲೂ ಹೆಚ್ಚು ಸರಾಸರಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಯುಎಇಯಲ್ಲಿ ಮುಕ್ತಾಯಗೊಂಡ ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ, ತಮ್ಮ ವೃತ್ತಿ ಜೀವನದ 100ನೇ ಪಂದ್ಯವನ್ನಾಡಿದ್ದರು. ಭಾನುವಾರ ಗುವಹಾಟಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಪಂದ್ಯದಲ್ಲಿ ಕೊಹ್ಲಿ, 100ನೇ ಇನ್ನಿಂಗ್ಸ್‌ ಆಡಲು ಸಜ್ಜಾಗಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌|ಟಾಪ್‌ ಸ್ಕೋರರ್‌ ಪಟ್ಟಿ

  1. ರೋಹಿತ್‌ ಶರ್ಮಾ, 3694 ರನ್‌,
  2. ವಿರಾಟ್‌ ಕೊಹ್ಲಿ, 3660 ರನ್‌,
  3. ಮಾರ್ಟಿನ್ ಗಪ್ಟಿಲ್, 3497 ರನ್‌
  4. ಪೌಲ್‌ ಸ್ಟರ್ಲಿಂಗ್‌, 3011 ರನ್‌
  5. ಬಾಬರ್‌ ಅಝಮ್‌, 3020