ದುಬೈ: ಚುಟುಕು ಕ್ರಿಕೆಟ್ನ ಮಹಾ ಸಂಗಮ ಐಸಿಸಿ ಟಿ20 ವಿಶ್ವಕಪ್-2022, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಲ್ಲಿ ಆರಂಭವಾಗಲಿದೆ. ಅಕ್ಟೋಬರ್ 16ರಿಂದ ಗುಂಪು ಹಂತದ ಪಂದ್ಯಗಳಿಗೆ ಚಾಲನೆ ದೊರೆಯಲಿದೆ. ಮೆಲ್ಬೋರ್ನ್ನಲ್ಲಿ ಫೈನಲ್ ಸೇರಿದಂತೆ ಏಳು ಮೈದಾನಗಳಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿದೆ. ಪ್ರಮುಖ ತಂಡಗಳನ್ನೊಳಗೊಂಡ ಸೂಪರ್ 12 ಹಂತ ಅಕ್ಟೋಬರ್ 22ರಿಂದ ಪ್ರಾರಂಭವಾಗಲಿದೆ.
ಟಿ20 ವಿಶ್ವಕಪ್-2022 ಟೂರ್ನಿಯ ವಿಜೇತರು ಸೇರಿದಂತೆ ಒಟ್ಟು ಬಹುಮಾನದ ಮೊತ್ತವನ್ನು ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ, ಐಸಿಸಿ ಘೋಷಿಸಿದೆ. 45 ಪಂದ್ಯಗಳು ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಟ್ಟು ನಗದು ಬಹುಮಾನ 45 ಕೋಟಿ ಕೋಟಿ ಆಗಿರಲಿದೆ ಎಂದು ಐಸಿಸಿ ಹೇಳಿದೆ.
ಚುಟುಕು ಕ್ರಿಕೆಟ್ನ ಚಾಂಪಿಯನ್ ಪಟ್ಟಕ್ಕೇರುವ ತಂಡ ಈ ಬಾರಿ ಬರೋಬ್ಬರಿ ₹13 ಕೋಟಿಯ ($1.6 ಮಿಲಿಯನ್) ಚೆಕ್ ಪಡೆಯಲಿದೆ. ರನ್ನರ್ ಅಪ್ ಆಗುವ ತಂಡ 6.5 ಕೋಟಿ ನಗದು ($800,000) ಬಹುಮಾನ ಪಡೆಯಲಿದೆ. ಸೆಮಿಫೈನಲ್ನಲ್ಲಿ ಪರಾಜಿತರಾಗುವ ಎರಡು ತಂಡಗಳು ತಲಾ ₹3.2 ಕೋಟಿ (($400,000) ನಗದು ಪಡೆಯಲಿದೆ.
ಕಳೆದ ಬಾರಿಯ ಟಿ20 ವಿಶ್ವಕಪ್ ಮಾದರಿಯಲ್ಲೇ ಈ ಬಾರಿಯೂ, ಸೂಪರ್ 12 ಹಂತದಲ್ಲಿ ನಿರ್ಗಮಿಸುವ ಎಂಟು ತಂಡಗಳು ತಲಾ ₹57 ಲಕ್ಷ ($ 70,000) ಬಹುಮಾನ ಪಡೆಯಲಿದೆ. ಸೂಪರ್ 12 ಹಂತದ ಪ್ರತಿ ಪಂದ್ಯದ ವಿಜೇತರು ₹32 ಲಕ್ಷ ಪಡೆಯಲಿದ್ದಾರೆ.
ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೂಪರ್-12 ಹಂತಕ್ಕೆ ಅರ್ಹತೆ ಪಡೆದಿದೆ. ನಮೀಬಿಯಾ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ಯುಎಇ, ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸೇರಿದಂತೆ 8 ತಂಡಗಳು ಗುಂಪು ಹಂತದಲ್ಲಿ ಸ್ಪರ್ಧಿಸಲಿದೆ.
ಗುಂಪು ಹಂತದಲ್ಲೇ ನಿರ್ಗಮಿಸುವ 4 ತಂಡಗಳು ತಲಾ ₹32 ಲಕ್ಷ ನಗದು ಬಹುಮಾನದ ಜೊತೆ ಟೂರ್ನಿಗೆ ವಿದಾಯ ಹೇಳಲಿದ್ದಾರೆ.
ಐಸಿಸಿ ಟಿ20 ವಿಶ್ವಕಪ್-2022 ಬಹುಮಾನತ ಮೊತ್ತದ ವಿವರ
ಚಾಂಪಿಯನ್ ತಂಡ – $1,600,000 (₹13 ಕೋಟಿ)
ರನ್ನರ್ಸ್-ಅಪ್ – $800,000 (₹6.5 ಕೋಟಿ)
ಸೆಮಿ-ಫೈನಲಿಸ್ಟ್ – $400,000 (ತಲಾ ₹3.2 ಕೋಟಿ)
ಸೂಪರ್ 12ರಲ್ಲಿ ಪ್ರತಿ ಪಂದ್ಯ ವಿಜೇತರು – $40,000 (₹32 ಲಕ್ಷ)
ಸೂಪರ್ 12ರಿಂದ ನಿರ್ಗಮಿಸಿದುವ ತಂಡಗಳು – $70,000 (₹57 ಲಕ್ಷ)
ಮೊದಲ ಸುತ್ತಿನಲ್ಲಿ ಗೆಲುವು – $40,000 (₹32 ಲಕ್ಷ)
ಮೊದಲ ಸುತ್ತಿನಲ್ಲಿ ನಿರ್ಗಮನ – $40,000 (₹32 ಲಕ್ಷ)
ಒಟ್ಟು – $5.6 ಮಿಲಿಯನ್ (₹45 ಕೋಟಿ)