ನಾಗ್ಪುರ| ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ

Prasthutha|

ಭಾರತ ಮತ್ತುಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.  ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆಯಾಗಿದೆ. ಆದರೆ ಸಂಜೆ 6.30ಕ್ಕೆ ನಡೆಬೇಕಾಗಿದ್ದ ಟಾಸ್‌, ಮಳೆಯಿಂದಾಗಿ ಮುಂದೂಡಲ್ಪಟ್ಟಿದೆ.

- Advertisement -

ಸಂಜೆ 7ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಅಧಿಕಾರಿಗಳು ಎರಡೆರಡು ಬಾರಿ ಮೈದಾನವನ್ನು ಪರೀಕ್ಷಿಸಿದ ಬಳಿಕ ಸಮಯವನ್ನು ಮುಂದೂಡಿದ್ದಾರೆ.  ಮಳೆ ನಿಂತಿದ್ದರೂ ಸಹ ಮೈದಾನ ಪೂರ್ತಿಯಾಗಿ ಒದ್ದೆಯಾಗಿದ್ದು, ಪಂದ್ಯ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ 8 ಗಂಟೆಗೆ ಮತ್ತೊಮ್ಮೆ ಅಧಿಕಾರಿಗಳು ಮೈದಾನವನ್ನು ಪರೀಕ್ಷಿಸಲಿದ್ದಾರೆ.

ಪಂದ್ಯ ಆರಂಭವಾದರೂ ಸಹ ಓವರ್‌ಗಳನ್ನು ಕಡಿತಗೊಳಿಸುವುದು ನಿಶ್ಚಿತವಾಗಿದೆ. ವಿದರ್ಭ ಕ್ರಿಕೆಟ್ ​​ಸ್ಟೇಡಿಯಂನ ಪಿಚ್‌ ಬೌಲರ್‌ಗಳಿಗೆ ನೆರವು ನೀಡುತ್ತದೆ. ಆದರೆ ಮೊಹಾಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಹೊರತು ಪಡಿಸಿ, ಭಾರತ ಉಳಿದೆಲ್ಲಾ ಬೌಲರ್‌ಗಳು, ಆಸೀಸ್‌ ಬ್ಯಾಟ್ಸ್‌ಮನ್‌ಗಳಿಂದ ಭರ್ಜರಿಯಾಗಿ ದಂಡಿಸಿಕೊಂಡಿದ್ದರು. ಅದರಲ್ಲೂ ಪ್ರಮುಖ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಹರ್ಷಲ್‌ ಪಟೇಲ್‌ 8 ಓವರ್‌ಗಳಲ್ಲಿ ಬರೋಬ್ಬರಿ 101 ರನ್‌ ಬಿಟ್ಟುಕೊಟ್ಟಿದ್ದರು.

- Advertisement -

ಕಳೆದ ಕೆಲ ದಿನಗಳಿಂದ ನಾಗ್ಪುರದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಗುರುವಾರದಂದು ಎರಡೂ ತಂಡಗಳ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು.

ಮೊದಲ ಪಂದ್ಯದಲ್ಲಿ208 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದ ಹೊರತಾಗಿಯೂ ಪಂದ್ಯವನ್ನು ಗೆಲ್ಲಲು ರೋಹಿತ್‌  ಬಳಗಕ್ಕೆ ಸಾಧ್ಯವಾಗಿರಲಿಲ್ಲ.



Join Whatsapp