ಮಂಗಳೂರು | ಶಂಕಿತ ಆರೋಪಿ ಮಾಜ್​​​ ತಂದೆ ಮೃತ್ಯು

Prasthutha|

ಶಿವಮೊಗ್ಗ: ಶಿವಮೊಗ್ಗ ಪೊಲೀಸರಿಂದ ಬಂಧಿತನಾಗಿರುವ ಶಂಕಿತ ಆರೋಪಿ ಮಾಝ ಮುನೀರ್ ಅಹ್ಮದ್ ನ ತಂದೆ ಮುನೀರ್ ಅಹ್ಮದ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇಂದು ಸಂಜೆ 5 ಗಂಟೆಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.


ಮೃತ ಮುನೀರ್ ಅಹ್ಮದ್ ರವರು ತೀರ್ಥಹಳ್ಳಿಯ ಮಾಜಿ ಪುರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ದಿವಂಗತ ಸಾಬ್ಜಾನ್ ಸಾಹೇಬರವರ ಪುತ್ರ .ಮೃತದೇಹವನ್ನು ರಾತ್ರಿ ತೀರ್ಥಹಳ್ಳಿಗೆ ತರಬಹುದೆಂದು ಕುಟುಂಬದವರು ತಿಳಿಸಿದ್ದಾರೆ .

- Advertisement -

ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ .ಮುನೀರ್ ಅಹಮ್ಮದ್ ರವರ ಮನೆ ತೀರ್ಥಹಳ್ಳಿ ಮೀನು ಮಾರ್ಕೆಟ್ ಹತ್ತಿರ ಸೊಪ್ಪುಗುಡ್ಡೆ ಯಲ್ಲಿರುತ್ತದೆ . ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮುನೀರ್ ಅಹ್ಮದ್ ರವರು ಮಗ್ಗುಲಿನಲ್ಲಿ ಮನೆ ಮಾಡಿ ನೆಲೆಸಿದ್ದರು.

ಮಾಝ್ ಬಂಧನ ಬಳಿಕ ತಂದೆಗೆ ಹೃದಯಾಘಾತ: ಮಾಝ್ ಬಂಧನವಾದ ಬಳಿಕ ಮಾನಸಿಕವಾಗಿ ಮುನೀರ್ ಅಹಮದ್ ಕುಗ್ಗಿದ್ದರು ಎನ್ನಲಾಗಿದೆ. ಇಂದು ಸಂಜೆ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

- Advertisement -