ಗ್ರಾಹಕರಿಗೆ ಕರೆಂಟ್ ಶಾಕ್ ನೀಡಲು ಮುಂದಾದ ರಾಜ್ಯ ಬಿಜೆಪಿ ಸರ್ಕಾರ

Prasthutha|

ಬೆಂಗಳೂರು: ವಿದ್ಯುತ್ ಬಳಕೆದಾರರಿಗೆ ರಾಜ್ಯ ಬಿಜೆಪಿ ಸರ್ಕಾರ ಕರೆಂಟ್ ಶಾಕ್ ನೀಡಲು ಮುಂದಾಗಿದ್ದು, ಆಕ್ಟೋಬರ್ 1 ರಿಂದ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.

ಪ್ರಾಧಿಕಾರದ ಈ ಆದೇಶದಿಂದಾಗಿ ವಿದ್ಯುತ್ ದರ ಏರಿಕೆಯಾಗಲಿದ್ದು, ವಿದ್ಯುತ್ ಗ್ರಾಹಕರಿಗೆ ಮತ್ತಷ್ಟು ದುಬಾರಿಯಾಗಲಿದೆ. ಇದರೊಂದಿಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್’ಗೆ 43 ಪೈಸೆ, ಮೆಸ್ಕಾಂ 24 ಪೈಸೆ, ಹೆಸ್ಕಾಂ 35 ಪೈಸೆ ಮತ್ತು ಜೆಸ್ಕಾಂ 35 ಪೈಸೆಯಷ್ಟು ಹೆಚ್ಚಿಸಿದೆ.

- Advertisement -