93 ವರ್ಷದ ಅಜ್ಜನ ಮೃತದೇಹವನ್ನು ಪ್ರಿಡ್ಜ್ ನಲ್ಲಿಟ್ಟ ಮೊಮ್ಮಗ

Prasthutha|

ಹೈದರಾಬಾದ್: ಮೃತಪಟ್ಟ ತನ್ನ 93 ವರ್ಷದ ಅಜ್ಜನ ಅಂತ್ಯಸಂಸ್ಕಾರವನ್ನು ನೆರವೇರಿಸಲು ಹಣವಿಲ್ಲದ ಕಾರಣ ಮೊಮ್ಮಗ, ಅಜ್ಜನ ಶವವನ್ನು ಫ್ರಿಜ್‌ನೊಳಗೆ ಇಟ್ಟಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮನೆಯಿಂದ ದುರ್ವಾಸನೆಯ ಬಗ್ಗೆ ನೆರೆಹೊರೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ವಾರಂಗಲ್‌ ನ ಪರ್ಕಳದಲ್ಲಿರುವ ಮನೆಗೆ ಬಂದು ಪರಿಶೀಲನೆ ನಡೆಸಿದಾಗ, ರೆಫ್ರಿಜರೇಟರ್ ಒಳಗೆ ಕೊಳೆತ ದೇಹ ಕಂಡುಬಂದಿದೆ.

- Advertisement -


ವೃದ್ಧ ಹಾಗೂ ಅವರ ಮೊಮ್ಮಗ ನಿಖಿಲ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ವೃದ್ಧನಿಗೆ ಬರುತ್ತಿದ್ದ ಪಿಂಚಣಿಯಿಂದ ಅವರು ಬದುಕುತ್ತಿದ್ದರು. “ಅಜ್ಜ ಇತ್ತೀಚೆಗೆ ಅನಾರೋಗ್ಯದಿಂದ ಮನೆಯಲ್ಲೇ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರ ನೆರವೇರಿಸಲು ಹಣ ಇಲ್ಲದ್ದರಿಂದ ಅಜ್ಜನ ಸಾವಿನ ನಂತರ, ಮೊಮ್ಮಗ ಆತನ ದೇಹವನ್ನು ಬೆಡ್‌ ಶೀಟ್‌ನಿಂದ ಸುತ್ತಿ ಫ್ರಿಜ್‌ನಲ್ಲಿ ಇರಿಸಿದ್ದಾನೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ತನ್ನ ಅಜ್ಜ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ. ಅಂತಿಮ ಸಂಸ್ಕಾರಕ್ಕೆ ಹಣವಿಲ್ಲದ ಕಾರಣ ಶವವನ್ನು ಫ್ರಿಜ್‌ನಲ್ಲಿಟ್ಟಿದ್ದೇನೆ ಎಂದು ನಿಖಿಲ್ (23) ಪೊಲೀಸರಿಗೆ ವಿಚಾರಣೆಯ ವೇಳೆ ತಿಳಿಸಿದ್ದಾನೆ. ಅಜ್ಜ ಸಾವನ್ನಪ್ಪಿರುವುದು ಗೊತ್ತಾದರೆ ಪಿಂಚಣಿ ಬರುವುದು ನಿಂತು ಹೋಗುತ್ತದೆ ಎಂಬ ಭಯದಿಂದ ದೇಹವನ್ನು ಬಚ್ಚಿಟ್ಟಿದ್ದಾನೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಪೊಲೀಸರು ತಿಳಿಸಿದ್ದಾರೆ.



Join Whatsapp