90 ಕಾಂಗ್ರೆಸ್ ಶಾಸಕರಿಂದ ಸಾಮೂಹಿಕ ರಾಜೀನಾಮೆ ಬೆದರಿಕೆ: ಯಾವುದೂ ನನ್ನ ಕೈಯಲ್ಲಿಲ್ಲ ಎಂದ ಗೆಹ್ಲೋತ್

ನವದೆಹಲಿ: 90 ಕ್ಕೂ ಹೆಚ್ಚು ರಾಜಸ್ಥಾನ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕುತ್ತಿದ್ದಂತೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್,  ಪಕ್ಷದ ಕೇಂದ್ರ ನಾಯಕತ್ವಕ್ಕೆ ಸಂದೇಶ ರವಾನಿಸಿದ್ದು ಇದು ನನ್ನ ಕೈಯ್ಯಲ್ಲಿಲ್ಲ ಎಂದು ಹೇಳಿದ್ದಾರೆ

71 ವರ್ಷ ವಯಸ್ಸಿನ ಗೆಹ್ಲೋಟ್, ಎರಡು ದಶಕಗಳಿಗೂ ನಂತರ ಕಾಂಗ್ರೆಸ್ ಪಕ್ಷ, ಮೊದಲ ಗಾಂಧಿಯೇತರ ನಾಯಕನಿಗಾಗಿ ಪಕ್ಷವು ತಯಾರಿ ನಡೆಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷಗಿರಿಯತ್ತ ಗೆಹ್ಲೋತ್ ಅವರೂ ಕಣ್ಣಿಟ್ಟಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅವರನ್ನು ರಾಜಸ್ಥಾನ ಮುಖ್ಯಮಂತ್ರಿಯಾಗಿ ಬದಲಾಯಿಸಬೇಕೆಂದು ಕಾಂಗ್ರೆಸ್ ನಾಯಕತ್ವವು ಬಯಸುತ್ತದೆ ಎಂಬ ವರದಿಗಳು ಬರುತ್ತಿದ್ದಂತೆ ಭಾನುವಾರ ಸಂಜೆ ಭಾರಿ ಬಿಕ್ಕಟ್ಟನ್ನು ಹುಟ್ಟುಹಾಕಿದ್ದು, ಸಾಮೂಹಿಕ ರಾಜೀನಾಮೆಯ ಬೆದರಿಕೆಗಳು ಭುಗಿಲೆದ್ದಿದೆ .

- Advertisement -

ನಾಯಕತ್ವಕ್ಕೆ ನಿಕಟವಾಗಿರುವ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ರೊಂದಿಗೆ ಗೆಹ್ಲೋಟ್ ದೂರವಾಣಿಯಲ್ಲಿ ಮಾತನಾಡಿದ್ದು, ಯಾವುದೂ ನನ್ನ ಕೈಯಲ್ಲಿಲ್ಲ. ಶಾಸಕರಿಗೆ ಸಿಟ್ಟು ಬಂದಿದೆ ಎಂದು ಹೇಳಿದ್ದಾರೆ. 2020 ರಲ್ಲಿ ಸಚಿನ್ ಪೈಲಟ್ ಪಕ್ಷದ ವಿರುದ್ಧ ಬಂಡಾಯವೆದ್ದು ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದರು. ಈ ಕಾರಣದಿಂದ ಕುಪಿತಗೊಂಡಿರುವ ಗೆಹ್ಲೋತ್ ಮತ್ತವರ ಸಂಘಡಿಗರು ಯಾವುದೇ ಕಾರಣಕ್ಕೂ ಪೈಲೆಟ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಒಂದು ವೇಳೆ ತಮ್ಮ ಮನವಿಯನ್ನು ಕಾಂಗ್ರೆಸ್ ನಾಯಕತ್ವ ಒಪ್ಪದೇ ಇದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ.

- Advertisement -