ಸಚಿವಾಲಯದ ಆವರಣದಲ್ಲೇ ಗುತ್ತಿಗೆ ದಂಧೆ| 15 ಕೋಟಿ ವಂಚನೆ| ಆರೋಗ್ಯ ಸಚಿವಾಲಯದ ಮೂವರು ಸಿಬ್ಬಂದಿ ಸೇರಿ ಐವರ ಬಂಧನ

Prasthutha|

ನವದೆಹಲಿ: ದೇಶಾದ್ಯಂತ ಕೋವಿಡ್ ಲಸಿಕೆ ಸಾಗಿಸುವ ಗುತ್ತಿಗೆ ಕೊಡಿಸುವ ಭರವಸೆ ನೀಡಿ, ಹಲವು ಜನರಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂವರು ಸಿಬ್ಬಂದಿ ಸೇರಿದಂತೆ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

- Advertisement -

ದೇಶಾದ್ಯಂತ ಕೋವಿಡ್ -19 ಲಸಿಕೆಗಳನ್ನು ಸಾಗಿಸಲು ಟೆಂಡರ್ಗಳನ್ನು ಕೊಡಿಸುವುದಾಗಿ ಗ್ಯಾಂಗ್ ಭರವಸೆ ನೀಡಿದ್ದು, ಜನರಿಂದ 15 ಕೋಟಿ ರೂ.ಗಳನ್ನು ತೆಗೆದುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಹರ್ಮೆನ್ ಸಬರ್ವಾಲ್, ಗೋವಿಂದ್ ತುಳಸಿಯನ್, ದಿಪ್ರಾನಾ ತಿವಾರಿ, ತ್ರಿಲೋಕ್ ಸಿಂಗ್ ಮತ್ತು ಮೃತ್ಯುಂಜಯ್ ರಾಯ್ ಎಂದು ಗುರುತಿಸಲಾಗಿದೆ. ಜಂಟಿ ಆಯುಕ್ತ (ಇಒಡಬ್ಲ್ಯೂ) ಛಾಯಾ ಶರ್ಮಾ ಅವರ ಪ್ರಕಾರ, ಮೃತ್ಯುಂಜಯ್ ರಾಯ್ ಅವರು ಸ್ವಾಗತ ಅಧಿಕಾರಿಯಾಗಿದ್ದು, ತ್ರಿಲೋಕ್ ಸಿಂಗ್ ಮತ್ತು ದೀಪರಾನಾ ತಿವಾರಿ ಸಚಿವಾಲಯದಲ್ಲಿ ಕೆಲಸ ಮಾಡುವ ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿಯಾಗಿದ್ದರು.

ಆರೋಪಿಗಳು ತಿಂಗಳುಗಳವರೆಗೆ ಪತ್ತೆಯಾಗದೆ ಸಚಿವಾಲಯದ ಆವರಣದಲ್ಲೇ ದಂಧೆಯನ್ನು ಹೇಗೆ ನಡೆಸಲು ಸಾಧ್ಯವಾಯಿತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp