ಯಶಸ್ವಿ ಜೈಸ್ವಾಲ್‌ರನ್ನು ಮೈದಾನದಿಂದ ಹೊರ ಕಳುಹಿಸಿದ ಅಜಿಂಕ್ಯ ರಹಾನೆ

Prasthutha|

ಕೊಯಂಬತ್ತೂರು: ಕ್ರಿಕೆಟ್‌ ಚರಿತ್ರೆಯ ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ ತನ್ನ ಸಹ ಆಟಗಾರನನ್ನೇ ನಾಯಕ ಮೈದಾನದಿಂದ ಹೊರ ಕಳುಹಿಸಿದ ಘಟನೆ ನಡೆದಿದೆ. ಕೊಯಂಬತ್ತೂರ್‌ನಲ್ಲಿ ನಡೆದ ದುಲೀಪ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಪಶ್ಚಿಮ ವಲಯ ತಂಡದ ಯಶಸ್ವಿ ಜೈಸ್ವಾಲ್‌, ತಂಡದ ನಾಯಕ ಅಜಿಂಕ್ಯ ರಹಾನೆಯ ಕೋಪಕ್ಕೆ ಗುರಿಯಾಗಿ ಮೈದಾನದಿಂದ ಹೊರ ಕಳುಹಿಸಿದ ಘಟನೆ ಕೂಡ ನಡೆಯಿತು.

- Advertisement -

ಆಗಿದ್ದೇನು ?

ಕೊಯಂಬತ್ತೂರಿನ ಎಸ್‌ಎನ್‌ಆರ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿದ್ದ ದುಲೀಪ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಪಶ್ಚಿಮ ಮತ್ತು ದಕ್ಷಿಣ ವಲಯ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದ ಅಂತಿಮ ದಿನ, ಭಾನುವಾರ 4 ವಿಕೆಟ್‌ಗಳ ನೆರವಿನಿಂದ 373 ರನ್‌ಗಳಿಸಬೇಕಾದ ಕಠಿಣ ಗುರಿ ದಕ್ಷಿಣ ವಲಯದ ಮುಂದಿತ್ತು.

- Advertisement -

ಆದರೆ ಫೈನಲ್‌ ಪಂದ್ಯದ ಅಂತಿಮ ದಿನದ ಬೆಳಗಿನ ಅವಧಿಯಲ್ಲಿ ಆಟಗಾರರ ಮಧ್ಯೆ ಸ್ಲೆಡ್ಜಿಂಗ್​ ವಿವಾದ ಉಂಟಾಗಿದೆ. 50ನೇ ಓವರ್​ ವೇಳೆ ದಕ್ಷಿಣ ವಲಯದ ಬ್ಯಾಟರ್​ ಟಿ ರವಿತೇಜ ಮತ್ತು ಪಶ್ಚಿಮ ವಲಯದ ಯಶಸ್ವಿ ಜೈಸ್ವಾಲ್​ ಮಧ್ಯೆ ಮಾತು ಬೆಳೆದಿದೆ. ಇಬ್ಬರಿಗೂ ಫೀಲ್ಡ್​ ಅಂಪೈರ್​ಗಳು ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ಜೈಸ್ವಾಲ್​ ಮತ್ತೆ ಕೆಣಕ್ಕಿದ್ದಾರೆ. ಇದರಿಂದ ರವಿತೇಜ ಈ ಬಗ್ಗೆ ಅಂಪೈರ್​ಗೆ ದೂರಿದ್ದಾರೆ. ಮಧ್ಯಪ್ರವೇಶಿಸಿದ ನಾಯಕ ಅಜಿಂಕ್ಯಾ ರಹಾನೆ ಇಬ್ಬರು ಆಟಗಾರರನ್ನು ಸಮಾಧಾನ ಮಾಡಿದರು.

ಒಂದು ಹಂತದಲ್ಲಿ ಅಜಿಂಕ್ಯಾ ರಹಾನೆ ಮಾತನಾಡುತ್ತಿದ್ದಂತೆಯೇ ಜೈಸ್ವಾಲ್, ರವಿತೇಜರನ್ನು ​ ನಿಂದಿಸುತ್ತಿದ್ದರು. ರಹಾನೆ ಆತನನ್ನು ಸಮಾಧಾನ ಮಾಡಲು ಕರೆದೊಯ್ದರು. ಸ್ವಲ್ಪ ಸಮಯದ ಬಳಿಕ ಅಜಿಂಕ್ಯಾ ರಹಾನೆ, ಯಶಸ್ವಿ ಜೈಸ್ವಾಲ್​ರನ್ನು ಮೈದಾನದಿಂದಲೇ ಹೊರ ಕಳುಹಿಸಿದರು. ನಾಯಕನ ನಿರ್ಧಾರದಿಂದ ಅಸಮಧಾನಗೊಂಡ ಯಶಸ್ವಿ ಜೈಸ್ವಾಲ್​ ಗೊಣಗುತ್ತಲೇ ಹೊರ ನಡೆದರು. ಬಳಿಕ ಇನಿಂಗ್ಸ್‌ನ 65ನೇ ಓವರ್‌ನಲ್ಲಿ ಜೈಸ್ವಾಲ್​ರನ್ನು ಮತ್ತೆ ಮೈದಾನಕ್ಕೆ ಕರೆಯಿಸಿಕೊಳ್ಳಲಾಯಿತು.

​ ಯಶಸ್ವಿ ಜೈಸ್ವಾಲ್ ಅಮೋಘ  ದ್ವಿಶತಕ (263 ರನ್‌) ಮತ್ತು ಸರ್ಫರಾಜ್ ಖಾನ್ ಗಳಿಸಿದ ಅಜೇಯ 178 ರನ್​ ನೆರವಿನಿಂದ ಪಶ್ಚಿಮ ವಲಯ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 585 ರನ್​ಗಳ ಬೃಹತ್​ ಮೊತ್ತ ಗಳಿಸಿತು. ಇದರಿಂದ ದಕ್ಷಿಣ ವಲಯ ತಂಡ ಟ್ರೋಫಿ ಗೆಲ್ಲಲು 529 ರನ್‌ಗಳ ಗುರಿ ಪಡೆದಿತ್ತು. ಆದರೆ ನಾಯಕ ಅಜಿಂಕ್ಯಾ ರಹಾನೆ ಎರಡು ಇನ್ನಿಂಗ್ಸ್‌ಗಳಲ್ಲಿ 8 ಮತ್ತು 15 ರನ್‌ಗಳಿಸಿ ನಿರಾಸೆ ಅನುಭವಿಸಿದರು.

Join Whatsapp