84ರ ವೃದ್ಧೆ ವಿಮಾನ ಚಲಾವಣೆ: ವೀಡಿಯೋ ವೈರಲ್

Prasthutha|

ಅಮೆರಿಕ : 84 ವರ್ಷದ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ವೃದ್ಧ ಮಹಿಳೆಯೊಬ್ಬರು ವಿಮಾನ ಚಲಾಯಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

- Advertisement -


ಅಮೆರಿಕಾದ ನ್ಯೂ ಹ್ಯಾಂಪ್’ ಶೇರ್ ನಿವಾಸಿ ಮೈತ್ರಾ ಗೆಗೆ ವೃತ್ತಿಯಲ್ಲಿ ಪೈಲೆಟ್ ಆಗಿ ನಿವೃತ್ತಿ ಹೊಂದಿದ್ದರು. ಮೈತ್ರಾಗೆ ಈಗ 84 ವಯಸ್ಸು. ಪಾರ್ಕಿನ್ಸನ್ ಕಾಯಿಲೆಯೂ ಅವರನ್ನು ಬಾಧಿಸಿದೆ. ಹೀಗಾಗಿ ಹೆಚ್ಚು ಕಾಲ ತಾನು ಬದುಕುವುದಿಲ್ಲ ಎಂದು ಪುತ್ರ ಎರಿಲ್ ಗೆಗೆ ಬಳಿ ಹೇಳಿಕೊಡ ಮೈತ್ರಾ ಗೆಗೆ, ತನ್ನ ಕೊನೆಯ ಆಸೆಯೊಂದನ್ನು ನೆರವೇರಿಸಿ ಕೊಡುವಂತೆ ಕೇಳಿಕೊಂಡಿದ್ದಾರೆ.


ತನ್ನ ಯೌವನ ಕಾಲದಲ್ಲಿ ಪೈಲೆಟ್ ಆಗಿದ್ದ ನೆನಪನ್ನು ಮರುಕಳಿಸುವಂತೆ ಕೊನೇಯದಾಗಿ ಮತ್ತೊಮ್ಮೆ ವಿಮಾನ ಚಲಾಯಿಸುವ ಆಸೆಯನ್ನು ಪುತ್ರನ ಬಳಿ ಹೇಳಿಕೊಂಡಿದ್ದಾರೆ. ವೃದ್ಧ ತಾಯಿಯ ಕೊನೇ ಆಸೆಯನ್ನು ಪೈಲಟ್ ಆಗಿರುವ ತನ್ನ ಸ್ನೇಹಿತ ಕೋಡಿ ಮಾಟೆಲ್ಲಿಯೋ ಬಳಿ ಎರಿಲ್ ವಿವರಿಸಿದ್ದಾನೆ. ಬಳಿಕ 84 ವಯಸ್ಸಿನ ಮೈತ್ರಾ ವಿಮಾನ ಚಲಾಯಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಯಿತು. ಕೊನೆಗೆ ನ್ಯೂ ಹ್ಯಾಂಪ್’ ಶೇರ್’ ನಲ್ಲಿರುವ ವಿನ್ನಿ ಪೆಸೌಕಿ ಕೆರೆ ಹಾಗೂ ಕಿಯಾರ್ಸಜ್ರ್ ಬೆಟ್ಟದ ನಡುವೆ ಮೈತ್ರಾ ಗೆಗೆ ವಿಮಾನ ಚಲಾಯಿಸಿದ್ದಾರೆ. ಕಾಕ್ ಪಿಟ್’ ನಲ್ಲಿ ಮತ್ತೊಮ್ಮೆ ಪೈಲೆಟ್ ಆದ ತನ್ನ ವೃದ್ಧ ತಾಯಿಯ ವೀಡಿಯೋ’ವನ್ನು ಸ್ವತಃ ಮಗನಾದ ಎರಿಲ್ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Join Whatsapp