ಪತ್ನಿಯೊಂದಿಗೆ ಜಗಳವಾಡಿ ತನ್ನ ಮನೆಗೆ ಬೆಂಕಿ ಹಚ್ಚಿದ ಭೂಪ; 10 ಮನೆಗಳು ಭಸ್ಮ!

Prasthutha|

ಮುಂಬೈ: ಯುವಕನೊಬ್ಬ ಪತ್ನಿಯೊಂದಿಗೆ ಜಗಳವಾಡಿ ತನ್ನ ಮನೆಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ 10 ಮನೆಗಳು ಸುಟ್ಟು ಬೂದಿಯಾದ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಠಾಣ್ ತಾಲ್ಲೂಕಿನ ಮಜ್ಗಾನ್ ಗ್ರಾಮದಲ್ಲಿ ನಡೆದಿದೆ.

- Advertisement -

ಆರೋಪಿ ಸಂಜಯ್ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ. ಸಂಜಯ್ ಪತ್ನಿ ಪಲ್ಲವಿಯೊಂದಿಗೆ ಜಗಳವಾಡಿ ತನ್ನ ಮನೆಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯಿಂದಾಗಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ನೆರೆಯ ಮನೆಗಳಿಗೂ ಬೆಂಕಿ ಹಬ್ಬಿದ್ದು, ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರೂ 10 ಮನೆಗಳು ಸುಟ್ಟು ಬೂದಿಯಾಗಿದೆ.

ಗ್ರಾಮಸ್ಥರು ಸಂಜಯ್ ನನ್ನು ಬೆಂಕಿಯಿಂದ ರಕ್ಷಿಸಿ ಕ್ರೂರವಾಗಿ ಥಳಿಸಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪಲ್ಲವಿಯನ್ನು ಸಂಬಂಧಿಕರ ಮನೆಗೆ ವರ್ಗಾಯಿಸಲಾಗಿದ್ದು, ಸಂಜಯ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Join Whatsapp