ಪಾಕ್​ ಬಂಧನಲ್ಲಿದ್ದ 80 ಭಾರತೀಯ ಮೀನುಗಾರರಿಗೆ ಬಿಡುಗಡೆ ಭಾಗ್ಯ

Prasthutha|

ನವದೆಹಲಿ: ಪಾಕಿಸ್ತಾನದ ಕಡಲ ಭದ್ರತಾ ಪಡೆಗೆ ಗಡಿ ರೇಖೆ ಉಲ್ಲಂಘಿಸಿ ಆಗಾಗ ಭಾರತೀಯ ಮೀನುಗಾರು ಸೆರೆಯಾಗುತ್ತಿರುತ್ತಾರೆ. ಹಾಗೆ 2021- 22 ಹಾಗೂ 2019ರ ಸಮಯದಲ್ಲಿ ಪಾಕ್​ನ ಕಡಲ ಭದ್ರತಾ ಪಡೆಗೆ ಸಿಕ್ಕಿ ಬಂಧನದಲ್ಲಿ 173 ಮೀನುಗಾರರು ಸೆರೆಯಾಗಿದ್ದಾರೆ ಎಂಬುದು ಒಂದು ಅಂದಾಜು. ಅವರಲ್ಲಿ 80 ಮಂದಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಈ ವಾರ್ತೆಯು ಪಾಕ್ ಕಡೆಯಿಂದ ‘ಭಾರತ-ಪಾಕಿಸ್ತಾನ ಪ್ರಜಾಪ್ರಭುತ್ವ ಮತ್ತು ಶಾಂತಿ ವೇದಿಕೆ’ಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜೀವನ್‌ ಭಾಯ್ ಜಂಗಿ ಅವರಿಗೆ ಬಂದಿದೆ.

- Advertisement -

ಈ ಕುರಿತು ಮಾತಾಡಿದ ಜೀವನ್ ಜಂಗಿ, ಭಾರತೀಯ ಮೀನುಗಾರರ ಕುಟುಂಬಗಳಿಗೆ ಸಂತಸದ ಸುದ್ದಿಯಿದೆ. ಪಾಕಿಸ್ತಾನದ ಜೈಲಿನಲ್ಲಿರುವ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ನವೆಂಬರ್ 9 ರಂದು ಬಿಡುಗಡೆ ಮಾಡಲಿದೆ. ನವೆಂಬರ್ 12 ರಂದು ಅವರು ತಮ್ಮ ತಾಯ್ನಾಡು ವೆರಾವಲ್ ತಲುಪುತ್ತಾರೆ ಎಂದು ತಿಳಿಸಿದ್ದಾರೆ.

ಪಾಕ್ ಜೈಲಿನಲ್ಲಿ ಒಟ್ಟು 173 ಭಾರತೀಯ ಮೀನುಗಾರರು ಬಂಧಿಯಾಗಿದ್ದಾರೆ. 93 ಮಂದಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

- Advertisement -

ಇದಕ್ಕೂ ಮೊದಲು ಒಮ್ಮೆ 199 ಮೀನುಗಾರರನ್ನು, ನಂತರ 200 ಮೀನುಗಾರರನ್ನು ಪಾಕ್ ಬಿಡುಗಡೆ ಮಾಡಿತ್ತು. ಈಗ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡುತ್ತಿದೆ.

ಭಾರತದ ಜೈಲಲ್ಲಿ 83 ಪಾಕ್​ ಮೀನುಗಾರರು, ಬಿಡುಗಡೆಗೆ ಮನವಿ: ಪ್ರಪಂಚದೆಲ್ಲೆಡೆ ದೀಪಾವಳಿ ಹಬ್ಬದ ವಾತಾವರಣ ಕಳೆಗಟ್ಟುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ ಭಾರತೀಯ ಮೀನುಗಾರರು ಬಿಡುಗಡೆಯಾಗುತ್ತಿದ್ದು, ಮೀನುಗಾರರ

ಎಂದು ತಿಳಿಸಿದ್ದಾರೆ.

Join Whatsapp