ಫೆ.11ಕ್ಕೆ ಪಾಕಿಸ್ತಾನ ಸಾವರ್ತಿಕ ಚುನಾವಣೆ

Prasthutha|

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಸಾವರ್ತಿಕ ಚುನಾವಣೆ ಘೋಷಣೆಯಾಗಿದೆ. ಮುಂದಿನ ವರ್ಷದ ಫೆ.11ರಂದು ಸಾವರ್ತಿಕ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

- Advertisement -

ಪಾಕಿಸ್ತಾನದಲ್ಲಿ ಸಂಸತ್‌ನ ಕೆಳಮನೆ ನ್ಯಾಷನಲ್‌ ಅಸೆಂಬ್ಲಿ ವಿಸರ್ಜನೆಯಾದ 90 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿಗಳ ವಿಚಾರಣೆ ವೇಳೆ ಚುನಾವಣೆ ಆಯೋಗದ ಪರ ವಕೀಲ ಸಜೀಲ್‌ ಸ್ವಾತಿ ಈ ಮಾಹಿತಿ ಸುಪ್ರೀಂಗೆ ನೀಡಿದ್ದಾರೆ.

ಜ. 29ರ ವೇಳೆಗೆ ಕ್ಷೇತ್ರ ಪುನರ್‌ವಿಂಗಡನೆ ಕಾರ್ಯಗಳು ಸಂಪೂರ್ಣಗೊಳ್ಳಲಿವೆ. ಫೆ.11ರಂದು ಯಾವುದೇ ಸಮಸ್ಯೆ ಇಲ್ಲದೆ ಚುನಾವಣೆ ನಡೆಸಬಹುದಾಗಿದೆ ಎಂದು ಸಜೀಲ್ ಸ್ವಾತಿ ತಿಳಿಸಿದ್ದಾರೆ.

Join Whatsapp