ಪ್ಯಾಲೆಸ್ತೀನ್‌ನಲ್ಲಿ 3,760 ಮಕ್ಕಳ ಹತ್ಯೆ, 7 ಸಾವಿರಕ್ಕೂ ಮಕ್ಕಳು ಗಂಭೀರ ಗಾಯ: ಗಾಝಾ ಆರೋಗ್ಯ ಸಚಿವಾಲಯ

Prasthutha|

ಗಾಝಾ: ಇಸ್ರೇಲ್‌ ಹಾಗೂ ಹಮಾಸ್ ನಡುವಿನ ಯುದ್ಧವು ಇಂದಿಗೆ 28ನೇ ದಿನಕ್ಕೆ ಕಾಲಿಟ್ಟಿದೆ. ಗಾಝಾದ ಆರೋಗ್ಯ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ ಇಸ್ರೇಲ್ ನಡೆಸುವ ನಿರಂತರ ದಾಳಿಯಿಂದಾಗಿ ನಿನ್ನೆಯವರೆಗೆ ಒಟ್ಟು 3,760 ಪ್ಯಾಲೆಸ್ತೀನ್ ಮಕ್ಕಳು ಹತ್ಯೆಗೊಳಗಾಗಿದ್ದಾರೆ.

- Advertisement -

3760 ಮಕ್ಕಳು ಸೇರಿ ಒಟ್ಟು 9,061 ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಚಿವಾಲಯದ ವಕ್ತಾರ ಡಾ.ಅಶ್ರಫ್ ಅಲ್‌ ಕುದ್ರಾ ಮಾಹಿತಿ ನೀಡಿದ್ದಾರೆ.

ಮೃತಪಟ್ಟ ಮಕ್ಕಳ ಪೈಕಿ ಹಸುಗೂಸುಗಳು, ಅಂಬೆಗಾಲಿಡುತ್ತಿರುವ ಚಿಣ್ಣರೂ ಇದ್ದಾರೆ. ವಾಯು ಹಾಗೂ ಕ್ಷಿಪಣಿ ದಾಳಿಯಿಂದಾಗಿ ಉರುಳಿಬಿದ್ದ ಹಲವು ಕಟ್ಟಡಗಳ ಅಡಿಯಲ್ಲಿ ಮಕ್ಕಳು ಸಿಲುಕಿದ್ದರಿಂದ ಈ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

- Advertisement -

ಸಚಿವಾಲಯವು ಅಕ್ಟೋಬರ್‌ 26ರಂದು ನೀಡಿದ್ದ ಅಂಕಿಅಂಶ ಆಧರಿಸಿ ಎಪಿ ಸುದ್ದಿಸಂಸ್ಥೆ ಕೂಡ ಸಾವಿನ ಸಂಖ್ಯೆ ಬಗ್ಗೆ ವಿಶ್ಲೇಷಣೆ ನಡೆಸಿದ್ದು, ಮೃತ‍ಪಟ್ಟವರಲ್ಲಿ 12 ವರ್ಷದೊಳಗಿನ 2,001 ಹಾಗೂ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ 615 ಚಿಣ್ಣರು ಇದ್ದಾರೆ ಎಂದು ವರದಿ ಮಾಡಿದೆ.

ಗಾಝಾದಲ್ಲಿರುವ ವೈದ್ಯರ ಮಾಹಿತಿ ಪ್ರಕಾರ, ಏಳು ಸಾವಿರಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

Join Whatsapp