SDPI ಗುರುಪುರ ಗ್ರಾಮ ಸಮಿತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ

Prasthutha|

ಗುರುಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಗ್ರಾಮ ಸಮಿತಿಯ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು SDPI ಅಡ್ಡೂರು ಕಚೇರಿಯ ಮುಂಭಾಗದಲ್ಲಿ ನೆರವೇರಿತು

- Advertisement -

ಧ್ವಜಾರೋಹಣವನ್ನು ಗ್ರಾಮ ಸಮಿತಿಯ ಅಧ್ಯಕ್ಷ ಎ.ಕೆ.ಮುಸ್ತಾಕ್ ನೆರವೇರಿಸಿದರು ಕಾರ್ಯಕ್ರಮವನ್ನು ಉದ್ದೇಶಿಸಿ ಮದ್ರಾಸ ಮ್ಯಾನೇಜ್ಮೆಂಟ್ ದ.ಕ.ಜಿಲ್ಲಾಧ್ಯಕ್ಷ ಹಾಜಿ M.H.ಮೊಹಿದ್ದೀನ್, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಫಾರ ನಾಸೀರ್ ಮಾತನಾಡಿದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಅಧ್ಯಕ್ಷರಾದ ಅಹ್ಮದ್ ಬಾವ ಅಂಗಡಿಮನೆ, ಉಪಾಧ್ಯಕ್ಷರಾದ ಝೈನುದ್ದೀನ್, ಸಲಹೆಗಾರ ಖಾಸಿಂ ಪ್ಯಾರ, SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಗುರುಪುರ, ಗುರುಪುರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ದಿಲ್ಶಾದ್ ಅಶ್ರಫ್ ಗುರುಪುರ ಗ್ರಾಮ ಪಂಚಾಯತ್ ಸದಸ್ಯರುಗಳಾದ ಎ.ಕೆ.ರಿಯಾಝ್, ಮೊಹಮ್ಮದ್ ಅಶ್ರಫ್, ಶಾಹಿಕ್ ಪಂಡೇಲ್, ಮನ್ಸೂರ್ ಟಿಬೆಟ್, ಬುಶ್ರಾ, ಅಝ್ಮೀನ, ಮರಿಯಮ್, ಉಪಸ್ಥಿತರಿದ್ದರು

Join Whatsapp