SDPI ಕಾಟಿಪಳ್ಳ ವಾರ್ಡ್ ಸಮಿತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ

Prasthutha|

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಟಿಪಳ್ಳ ವಾರ್ಡ್ ಸಮಿತಿಯ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಕಾಟಿಪಳ್ಳ ಜಂಕ್ಷನ್ ಮುಂಭಾಗದಲ್ಲಿ ನೆರವೇರಿತು

- Advertisement -

ಧ್ವಜಾರೋಹಣವನ್ನು ವಾರ್ಡ್ ಅಧ್ಯಕ್ಷ ಫಯಾಜ್ ಸುಲ್ತಾನ್ ನೆರವೇರಿಸಿದರು .ಕಾರ್ಯಕ್ರಮವನ್ನು ಉದ್ದೇಶಿಸಿ SDTU ಇದರ ಜಿಲ್ಲಾ ಸಮಿತಿ ಸದಸ್ಯ ಇರ್ಫಾನ್ ಕಾಲೋನಿ ಹಾಗು SDPI ವಾರ್ಡ್ ಸೆಕ್ರೆಟರಿ ತೌಕೀರ್ ಮಾತನಾಡಿದರು.

ಮುಖ್ಯ ಅತಿಥಿ ಯಾಗಿ ಅಬ್ಬಾಸಾಕ ನ್ಯೂಸ್ಟರ್ ಸೂಪರ್ ಬಜಾರ್,ಬಾವಕ ಕಾಟಿಪಳ್ಳ, ಉಸ್ಮಾನ್ ಅಂಗಡಿ ಕಾಟಿಪಳ್ಳ, ಇಬ್ರಾಹಿಂ. B ಇವರೆಲ್ಲರೂ ಉಪಸ್ಥಿತರಿದ್ದರು .ಇಂತಿಯಾಜ್ ಕೈಕಂಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Join Whatsapp