ತೈವಾನ್ ನಲ್ಲಿ 200 ದಿನಗಳಲ್ಲಿ ಒಂದೇ ಒಂದು ಕೊರೊನ ಕೇಸ್ ಪತ್ತೆಯಾಗಿಲ್ಲ | ಅದಕ್ಕಾಗಿ ಅವರು ಕೈಗೊಂಡ ಕ್ರಮಗಳೇನು ಗೊತ್ತಾ?

Prasthutha|

ನವದೆಹಲಿ : ಕೋವಿಡ್ – 19 ಪ್ರಕರಣಗಳಿಂದ ತತ್ತರಿಸಿ ಹೋಗಿರುವ ದೇಶಗಳ ಸಾಲಿನಲ್ಲಿರುವ ಫ್ರಾನ್ಸ್ ಮತ್ತು ಜರ್ಮನಿ ಈಗ ಮತ್ತೆ ಲಾಕ್ ಡೌನ್ ಗೆ ನಿರ್ಧರಿಸಿದೆ. ಅಮೆರಿಕ ಕೂಡ ಈ ಸಂಕಷ್ಟದಿಂದ ಹೊರಬರಲಾಗದೆ ಒದ್ದಾಡುತ್ತಿದೆ. ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ, ಇಲ್ಲೊಂದು ದೇಶದಲ್ಲಿ ಕಳೆದ 200 ದಿನಗಳಲ್ಲಿ ಸ್ಥಳೀಯವಾಗಿ ಒಂದೇ ಒಂದು ಕೋವಿಡ್ 19 ಪ್ರಕರಣ ವರದಿಯಾಗಿಲ್ಲ. ಹೌದು, ತೈವಾನ್ ಇಂತಹ ಮಹತ್ವದ ಸಾಧನೆ ಸಾಧಿಸಿದ ದೇಶ.

ತೈವಾನ್ ನಲ್ಲಿ 200 ದಿನಗಳಲ್ಲಿ ಒಂದೇ ಒಂದು ಕೋವಿಡ್ 19 ಪ್ರಕರಣ ದಾಖಲಾಗಿಲ್ಲ. ಏ.12ರಿಂದ ಇಲ್ಲಿ ವರೆಗೆ ಯಾವುದೇ ಪ್ರಕರಣ ದಾಖಲಾಗದೆ, 201ನೇ ದಿನಕ್ಕೆ ಯಶಸ್ವಿಯಾಗಿ ಪ್ರವೇಶಿಸಿದೆ.

- Advertisement -

ಏ.12ಕ್ಕೂ ಮೊದಲು ತೈವಾನ್ ನಲ್ಲಿ ಕೇವಲ 553 ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದವು ಮತ್ತು ಕೇವಲ ಏಳು ಸಾವುಗಳು ಸಂಭವಿಸಿದ್ದವು.

ಹೊರ ದೇಶಗಳಿಂದ ಬರುವವರನ್ನು ಬೇಗನೇ ತಡೆದುದು ಮತ್ತು ಪ್ರಯಾಣ ನೀತಿಯನ್ನು ಕಠಿಣವಾಗಿ ಪಾಲಿಸಿದುದು ವೈರಸ್ ಇಲ್ಲಿ ನಿಯಂತ್ರಣಕ್ಕೆ ಬರುವುದಕ್ಕೆ ಪ್ರಮುಖ ಕಾರಣ. ಅಲ್ಲದೆ, ಸಂಪರ್ಕ ಪತ್ತೆ, ತಂತ್ರಜ್ಞಾನ ಆಧಾರಿತ ಕ್ವಾರಂಟೈನ್, ಕೋವಿಡ್ ಸಂಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದುದು ಮತ್ತಿತರ ಪ್ರಮುಖ ವಿಷಯಗಳು ತೈವಾನ್ ನಲ್ಲಿ ಕೊರೊನ ನಿಯಂತ್ರಣಕ್ಕೆ ಬರಲು ಸಹಾಯಕಾರಿಯಾಯಿತು ಎಂದು ತಜ್ಞರು ಹೇಳಿದ್ದಾರೆ.

- Advertisement -