24 ಗಂಟೆಯಲ್ಲಿ ನಾಲ್ವರು ಪ್ರಮುಖರು ಟಿಎಂಸಿಗೆ ರಾಜೀನಾಮೆ | ಮಮತಾ ಬ್ಯಾನರ್ಜಿ ಪಕ್ಷ ತೊರೆದ ಮೂವರು ಶಾಸಕರು, ಓರ್ವ ಅಲ್ಪಸಂಖ್ಯಾತ ಮುಖಂಡ

Prasthutha|

ಕೊಲ್ಕತಾ : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನ ಒಬ್ಬೊಬ್ಬರೇ ನಾಯಕರು ಪಕ್ಷದಿಂದ ಕಳಚಲಾರಂಭಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಾಲ್ವರು ಪ್ರಮುಖರು ಟಿಎಂಸಿ ತೊರೆದಿದ್ದಾರೆ. ಇಂದು ಓರ್ವ ಶಾಸಕ ಸೇರಿದಂತೆ, ಪಕ್ಷದ ಅಲ್ಪಸಂಖ್ಯಾತ ಘಟಕದ ನಾಯಕ ಪಕ್ಷ ತೊರೆದಿದ್ದಾರೆ.

ಆದರೆ. ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ನಿನ್ನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುವೇಂದು ಅಧಿಕಾರಿಯವರ ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದ್ದಾರೆ. ಸೋಮವಾರ ತಮ್ಮನ್ನು ಭೇಟಿಯಾಗುವಂತೆ ಅಧಿಕಾರಿಗೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.

- Advertisement -

ಬರ್ರಾಕ್ ಪೊರ್ ಶಾಸಕ ಶೀಲಭದ್ರ ದತ್ತಾ ಇಂದು ಪಕ್ಷಕ್ಕೆ ರಾಜೀನಾಮೆ ನೀಡಿರುವ ಶಾಸಕ. ಅಲ್ಪಸಂಖ್ಯಾತ ಘಟಕದ ನಾಯಕ ಕಬೀರುಲ್ ಇಸ್ಲಾಮ್ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆ ಸುವೇಂದು ಅಧಿಕಾರಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಇನ್ನೋರ್ವ ಶಾಸಕ ಜಿತೇಂದ್ರ ತಿವಾರಿ ತನ್ನ ರಾಜೀನಾಮೆ ಘೋಷಿಸಿದ್ದರು.

ವಾರಾಂತ್ಯದಲ್ಲಿ ಬಿಜೆಪಿ ಮುಖಂಡ, ಕೇಂದ್ರ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಈ ವೇಳೆ ರಾಜೀನಾಮೆ ನೀಡಿರುವ ಟಿಎಂಸಿ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಗಳಿವೆ.  

- Advertisement -