ಶೇ.4ರಷ್ಟು ಹೆಚ್ಚಳವಾದ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ

Prasthutha|

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಶೇಕಡಾ 4ರಷ್ಟು ಹೆಚ್ಚಳದೊಂದಿಗೆ, ಡಿಎ ಶೇಕಡಾ 42 ರಿಂದ 46 ಕ್ಕೆ ಹೆಚ್ಚಿದಂತಾಗಿದೆ.

- Advertisement -

ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರದ ಹೆಚ್ಚುವರಿ ಕಂತಿನ ಬಿಡುಗಡೆ ಜುಲೈ 1 ರಿಂದ ಅನ್ವಯವಾಗಲಿದೆ. ಇದಲ್ಲದೆ, ರೈತರಿಗೆ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ..

ಕ್ಯಾಬಿನೆಟ್ ಸಭೆಯ ಮುಕ್ತಾಯದ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ನಿರ್ಧಾರವನ್ನ ಪ್ರಕಟಿಸಿದ್ದು, ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಈ ಕೆಳಗಿನಂತಿದೆ.
-2024-25ನೇ ಸಾಲಿಗೆ ಗೋಧಿಗೆ ಪ್ರತಿ ಕ್ವಿಂಟಾಲ್ ಗೆ 2,275 ರೂ.ಗಳ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ
-2024-25ನೇ ಸಾಲಿಗೆ ಬಾರ್ಲಿಗೆ ಪ್ರತಿ ಕ್ವಿಂಟಾಲ್ ಗೆ 1,850 ರೂ.ಗಳ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ
-2024-25ನೇ ಸಾಲಿಗೆ ಪ್ರತಿ ಕ್ವಿಂಟಾಲ್ ಕಡಲೆಗೆ 5,440 ರೂ.ಗಳ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ
-2024-25ನೇ ಸಾಲಿಗೆ ಪ್ರತಿ ಕ್ವಿಂಟಾಲ್ ಗೆ 6,425 ರೂ.ಗಳ ಕನಿಷ್ಠ ಬೆಂಬಲ ಬೆಲೆ ನೀಡಲು ಸಂಪುಟದ ಅನುಮೋದನೆ
-2024-25ನೇ ಸಾಲಿಗೆ ರೇಪ್ ಸೀಡ್, ಸಾಸಿವೆಗೆ ಪ್ರತಿ ಕ್ವಿಂಟಾಲ್ ಗೆ 5,650 ರೂ.ಗಳ ಕನಿಷ್ಠ ಬೆಂಬಲ ಬೆಲೆ ನೀಡಲು ಸಂಪುಟದ ಅನುಮೋದನೆ
-2024-25ನೇ ಸಾಲಿಗೆ ಕುಸುಬೆಗೆ ಪ್ರತಿ ಕ್ವಿಂಟಾಲ್ ಗೆ 5,880 ರೂ.ಗಳ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ