ಮಂಗಳೂರು: ರಾಜ್ಯಾದ್ಯಂತ ಇಂದು ಒಟ್ಟು 37 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದ್ದು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್ ಪೆಕ್ಟರ್ ನಾಗೇಶ್ ಅವರನ್ನು ಕೊಡಗು ಜಿಲ್ಲೆಗೆ ವರ್ಗಾಯಿಸಲಾಗಿದೆ.
ಮಂಗಳೂರಿನ ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಕೆ. ಅವರನ್ನು ಕೊಡಗು ಜಿಲ್ಲೆಯ ಡಿಸಿಆರ್ ಗೆ ವರ್ಗಾವಣೆ ಆಗಿದ್ದಾರೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಉಂಟಾದ ಈ ದಿಢೀರ್ ವರ್ಗಾವಣೆಗೆ ಪೊಲೀಸರ ಮಕ್ಕಳು ಗೊಂದಲಕ್ಕೀಡಾಗಿದ್ದಾರೆ ಎಂದು ಕೇಳಿ ಬರುತ್ತಿದೆ.