ಜ್ಞಾನವಾಪಿ ಮಸೀದಿಯ ಕೊಳ ಸಾರ್ವಜನಿಕ ಬಳಕೆಗೆ ನಿರ್ಬಂಧ; ಉತ್ತರ ಪ್ರದೇಶ ನ್ಯಾಯಾಲಯ

Prasthutha|

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ಹೇಳಿಕೆಯ ನಂತರ, ನ್ಯಾಯಾಲಯವು ಅದನ್ನು ಸಾರ್ವಜನಿಕರಿಗೆ ಮುಚ್ಚುವಂತೆ ಇಂದು ಆದೇಶಿಸಿದೆ.

- Advertisement -

ಮಸೀದಿಯ ಹಿಂದಿರುವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ ನಂತರ ಮಸೀದಿ ಸಂಕೀರ್ಣದ ಚಿತ್ರೀಕರಣಕ್ಕೆ ನ್ಯಾಯಾಲಯ ಆದೇಶಿಸಿತ್ತು. ಚಿತ್ರೀಕರಣದ ಕೊನೆಯ ದಿನವಾದ ಇಂದು “ಶಿವಲಿಂಗ” ಅಥವಾ ಶಿವನ ಅವಶೇಷವು ಕಂಡುಬಂದಿದೆ ಎಂದು ಅರ್ಜಿದಾರರು ಹೇಳಿದರು.

ಇಂದು ಬೆಳಿಗ್ಗೆ, ಕೊಳದಿಂದ ನೀರನ್ನು ಖಾಲಿ ಮಾಡಿದ ಸಂದರ್ಭದಲ್ಲಿ “ಶಿವಲಿಂಗ” ಕಂಡುಬಂದಿದೆ ಎಂದು ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.

- Advertisement -

ನಮಾಝ್ ನ  “ವುಝು” ಅಥವಾ ಅಂಗ ಶುದ್ದಿಗಾಗಿ ಬಳಸಲಾಗುವ ಕೊಳವನ್ನು ಪತ್ತೆ ಮಾಡಿದ ನಂತರ ಮೊಹರು ಮಾಡಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯವು ಮನವಿಯನ್ನು ಸ್ವೀಕರಿಸಿದ್ದು, ಸದ್ಯಕ್ಕೆ ಕೊಳವನ್ನು ಬಳಸದಂತೆ ನೋಡಿಕೊಳ್ಳಲು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಆದೇಶಿಸಿದೆ.

Join Whatsapp