ಕಾಶ್ಮೀರಿ ಅಲ್ಲದ 34 ವ್ಯಕ್ತಿಗಳು ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿಸಿದ್ದಾರೆ: ಕೇಂದ್ರ ಸರ್ಕಾರ

Prasthutha|

ನವದೆಹಲಿ: ಆಗಸ್ಟ್ 2019 ರಿಂದ ಜಮ್ಮು ಮತ್ತು ಕಾಶ್ಮೀರ (ಜೆ & ಕೆ) ದ ನಿವಾಸಿಗಳಲ್ಲದೆ ಸುಮಾರು 34 ವ್ಯಕ್ತಿಗಳು ಕಾಶ್ಮೀರ ಸೇರಿದಂತೆ ಕೇಂದ್ರಾಡಳಿತ ಪ್ರದೇಶ (ಯುಟಿ) ದಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಕೆಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.

- Advertisement -

“ಜೆ & ಕೆ ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ, 370 ನೇ ವಿಧಿ  ರದ್ದತಿ ನಂತರ ಹೊರಗಿನ 34 ವ್ಯಕ್ತಿಗಳು ಜೆ & ಕೆ ಯುಟಿಯಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ. ಆಸ್ತಿಗಳು ಜಮ್ಮು, ರಿಯಾಸಿ, ಉಧಂಪುರ ಮತ್ತು ಗಂದರ್ಬಲ್ ಜಿಲ್ಲೆಗಳಲ್ಲಿವೆ” ಎಂದು ಸಚಿವರು ಸ್ಟೇಟ್ ಫಾರ್ ಹೋಮ್ ನ ನಿತ್ಯಾನಂದ ರೈ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದರು.



Join Whatsapp