ನೀವು ಕಟ್ ಮಾಡಿದ ಮಾಂಸ ಹಲಾಲ್ ಎಂದು ನಾವು ತಿನ್ನಬೇಕಾ: ನಾಲಗೆ ಹರಿಯಬಿಟ್ಟ ರೇಣುಕಾಚಾರ್ಯ

Prasthutha|

ಬೆಂಗಳೂರು: ರಾಜ್ಯದಲ್ಲಿ ಶಾಂತಿ, ಕೋಮು ಸೌಹಾರ್ದತೆಯನ್ನು ಬೆಳೆಸಬೇಕಾಗಿದ್ದ ಜನಪ್ರತಿನಿಧಿಗಳು ಪರಸ್ಪರ ಧರ್ಮ ಧರ್ಮಗಳ ಮಧ್ಯೆ ವಿವಾದದ ಗುಲ್ಲೆಬ್ಬಿಸುವ ಪ್ರಯತ್ನಕ್ಕೆ ಇಳಿದಿರುವುದಕ್ಕೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯರ ಇತ್ತೀಚಿನ ಹೇಳಿಕೆಗಳೇ ಸಾಕ್ಷಿ. ಸದಾ ವಿವಾದದ ಮಾತುಗಳನ್ನಾಡಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುವ ರೇಣುಕಾಚಾರ್ಯ ಮತ್ತೆ ಹಲಾಲ್ ಕುರಿತಾದ ಚರ್ಚೆಗೆ ತುಪ್ಪ ಸುರಿದು ನಾಲಗೆ ಹರಿಯಬಿಟ್ಟಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಮಾತನಾಡಿರುವ ರೇಣುಕಾಚಾರ್ಯ, ಹಿಂದೂಗಳು ಮಾಂಸದ ಅಂಗಡಿ ಇಟ್ಟರೆ ಹಣಕಾಸಿನ ಸಹಾಯ ನಾನು ಮಾಡುತ್ತೇನೆ, ನ್ಯಾಯಯುತವಾಗಿ ಬದುಕಲು ಚಪ್ಪಲಿ ಅಂಗಡಿ ಇಟ್ಟರೂ ತಪ್ಪೇನಿಲ್ಲ. ಹಲಾಲ್ ಅಂದರೆ ಉಗುಳೋದು, ಉಗುಳುವುದು ನಿಮ್ಮ ಹಲಾಲಾ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಕುರಾನ್ ನಲ್ಲಿ ಉಗುಳಿ ಅಂತಾ ಹೇಳಲಾಗಿದೆಯಾ, ನೀವು ಕಟ್ ಮಾಡಿದ ಮಾಂಸವನ್ನು ಹಲಾಲ್ ಎಂದು ನಾವು ತಿನ್ನಬೇಕಾ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಹಲಾಲ್ ನಿಷೇಧದ ಅಭಿಯಾನ ಆರಂಭಿಸಿರುವ  ಬಜರಂಗದಳ, ವಿಎಚ್ ಪಿ ಸಹಿತ ಕೆಲವೊಂದು ಹಿಂದುತ್ವ ಸಂಘಟನೆಗಳು,  ಹಿಂದುಗಳು ಮುಸ್ಲಿಮರ ಅಂಗಡಿಯಲ್ಲಿ ಹಲಾಲ್ ಮಾಡಿದ ಮಾಂಸವನ್ನು ಖರೀಸುವುದನ್ನೇ ನಿಲ್ಲಿಸುವಂತೆ ಬಹಿರಂಗ ಹೇಳಿಕೆ ನೀಡಿದೆ.

Join Whatsapp