ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ಕೊಲೆಯತ್ನ : ಮೂವರ ಬಂಧನ

Prasthutha|

ಅಗರ್ತಲಾ : ತ್ರಿಪುರಾ ರಾಜ್ಯದ ಮುಖ್ಯಮಂತ್ರಿಯ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆಯೆಂದು ಶನಿವಾರ ಪೊಲೀಸರು ಖಚಿತಪಡಿಸಿದ್ದಾರೆ.

- Advertisement -

ಶ್ಯಾಮ್ ಪ್ರಸಾದ್ ಮುಖರ್ಜಿ ಬಡಾವಣೆಯ ತನ್ನ ನಿವಾಸದ ಸಮೀಪ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಗುರುವಾರ ಸಂಜೆ ವಾಕಿಂಗ್ ಗೆ ಹೋದ ಸಂದರ್ಭದಲ್ಲಿ ಸಾಕಷ್ಟು ಭದ್ರತೆಯ ನಡುವೆ 3 ಮಂದಿ ಅವರ ಕೊಲೆಗೆ ಯತ್ನಿಸಿದ್ದರೆಂದು ಭದ್ರತಾ ಸಿಬ್ಬಂದಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತನ್ನ ಮೇಲೆ ದಾಳಿಯಾಗುವ ಮುನ್ಸೂಚನೆಯನ್ನು ಅರಿತ ಮುಖ್ಯಮಂತ್ರಿ ಪಕ್ಕಕ್ಕೆ ಸರಿದು ದಾಳಿಯಿಂದ ತಪ್ಪಿಸಿಕೊಂಡರು. ಈ ದಾಳಿಯಿಂದ ಒರ್ವ ಭದ್ರತಾ ಸಿಬ್ಬಂದಿಗೆ ಗಂಭೀರವಾದ ಗಾಯವಾಗಿದೆಯೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 3 ಆರೋಪಿಗಳನ್ನು ಬಂಧಿಸಿ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಹತ್ಯೆಗೆ ಯತ್ನಿಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ತನಿಖೆಯನ್ನು ಮುಂದುವರಿಸಿದೆ.



Join Whatsapp