ನಕಲಿ ವೆಬ್‍ಸೈಟ್ ತೆರೆದು ವಂಚನೆ: ಮೂವರ ಬಂಧನ

Prasthutha|

ಬೆಂಗಳೂರು: ನಕಲಿ ವೆಬ್‍ಸೈಟ್ ತೆರೆದು  ಸಾರ್ವಜನಿಕರಿಗೆ ವಂಚಿಸುತ್ತಿದ್ದ ಮೂವರನ್ನು ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಿಹಾರ ಮೂಲದ ಯಶವಂತ ಬ್ರಹ್ಮದೇವ್ ಯಾದವ್(25) ಮುಕೇಶ್ ಕುಮಾರ್ ಯಾದವ್( 20)ಹಾಗೂ ವಿಜಯ್ ಕುಮಾರ್ ಯಾದವ್( 22) ಬಂಧಿತ ಆರೋಪಿಗಳು.

ವಿಆರ್ ಎಲ್  ಮೂವರ್ಸ್ ಅಂಡ್ ಪ್ಯಾಕರ್ಸ್ ಎಂಬ ಹೆಸರಿನಲ್ಲಿ ಆರೋಪಿಗಳು ನಕಲಿ ವೆಬ್‍ಸೈಟ್ ನಿರ್ಮಿಸಿ ವಂಚಿಸುತ್ತಿದ್ದರು ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

- Advertisement -

ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ನಗರದಿಂದ ಸಾಗರಕ್ಕೆ ಕಳುಹಿಸಲು ಗೂಗಲ್‍ ನಲ್ಲಿ  ಪ್ಯಾಕರ್ಸ್‍ ಅಂಡ್ ಮೂವರ್ಸ್‍ ಎಂದು ಹುಡುಕಿದಾಗ  ವಿಆರ್ ಎಲ್  ಮೂವರ್ಸ್ ಅಂಡ್ ಪ್ಯಾಕರ್ಸ್‍  ಹೆಸರಿನಲ್ಲಿ ನಕಲಿ ವೆಬ್‍ಸೈಟ್ ದೊರಕಿತ್ತು.  ಇದನ್ನು ಅಸಲಿ ವೆಬ್‍ಸೈಟ್ ಎಂದು ನಂಬಿದ ವ್ಯಕ್ತಿ ಅದರಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ  ಮಾಡಿದಾಗ ಆರೋಪಿಯು ಮೊದಲಿಗೆ ರೂ 1 ಸಾವಿರ ನೀಡಲು ತಿಳಿಸಿದ್ದು, ಹಣ ನೀಡಿದ ನಂತರ ಇಬ್ಬರು  ವ್ಯಕ್ತಿಗಳು ದೂರುದಾರರ ಮನೆಗೆ ಬಂದು ದ್ವಿಚಕ್ರ ವಾಹನವನ್ನು ಪ್ಯಾಕ್ ಮಾಡಿ ಕೊಂಡು ಹೋಗಿದ್ದರು.

ಮರು ದಿನ ದೂರುದಾರರ ಮೊಬೈಲ್‍ ಗೆ ವಾಟ್ಸ್ ಆಪ್ ಮುಖಾಂತರ ಬಿಲ್ ಕಳುಹಿಸಿ 8 ಸಾವಿರ ನೀಡುವಂತೆ ಬೆದಿಸಿರುವ ಆರೋಪಿಗಳು, ಹಣ ನೀಡದಿದ್ದಲ್ಲಿ  ವಾಹನವನ್ನುಕೊಡುವುದಿಲ್ಲ ಎಂದು ಸುಲಿಗೆ ಮಾಡಲು ಯತ್ನಿಸಿದ್ದರು.

ಈ ಬಗ್ಗೆ  ಬಂದ ದೂರನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಯಶವಂತಪುರ ಬಳಿ ಬಂಧಿಸಲಾಗಿದೆ. ವಿಚಾರಣೆ ವೇಳೆ  ಆರೋಪಿಗಳು ವಿ ಆರ್ ಎಲ್  ಎಂಬ ಹೆಸರಿನಲ್ಲಿ ಅಲ್ಲದೇ ಬೇರೆ ಬೇರೆ ಪ್ಯಾಕರ್ಸ್ ಅಂಡ್ ಮೂವರ್ಸ್ಎಂಬ ಹೆಸರಿನಲ್ಲಿ ವೆಬ್‍ಸೈಟ್ ಸೃಷ್ಟಿಸಿ ಮೊದಲಿಗೆ ಕಡಿಮೆ ಹಣ ಹೇಳಿ ಒಮ್ಮೆ ಅವರ ಕೈಗೆ ವಸ್ತು ಬಂದಬಳಿಕ ಹೆಚ್ಚು ಹಣ ಕೇಳಿ ಸುಲಿಗೆ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ 1 ದ್ವಿಚಕ್ರ ವಾಹನ  ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿ.ಇ.ಎನ್ ಪೊಲೀಸ್ ಇನ್ಸ್‌ ಪೆಕ್ಟರ್  ಸಂತೋಷ್ ರಾಮ್  ಮತ್ತವರ ಸಿಬ್ಬಂದಿ ಈ‌ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.



Join Whatsapp