ವಿಷಪೂರಿತ ಮದ್ಯ ಸೇವನೆಗೆ 20 ಮಂದಿ ಬಲಿ !

Prasthutha|

ಪಾಟ್ನಾ: ವಿಷಪೂರಿತ ಮದ್ಯ ಸೇವಿಸಿ 20 ಮಂದಿ ಮೃತಪಟ್ಟು, ಹಲವು ಮಂದಿ ಅಸ್ವಸ್ಥಗೊಂಡಿರುವ ಘಟನೆ ಗೋಪಾಲ್​ ಗಂಜ್​ ಜಿಲ್ಲೆಯ ಮೊಹಮದ್​ ಪುರ ಗ್ರಾಮದಲ್ಲಿ  ನಡೆದಿದೆ.

- Advertisement -

ಈ ಕುರಿತು ಮಾತನಾಡಿದ ಗೋಪಾಲ್ ​ಗಂಜ್ ಜಿಲ್ಲಾಧಿಕಾರಿ ಡಾ. ನವಲ್ ಕಿಶೋರ್ ಚೌಧರಿ ನಿಗೂಢ ಕಾರಣದಿಂದ ಸಾವುಗಳು ಸಂಭವಿಸಿವೆ. ದುರ್ಘಟನೆಯಿಂದ ಸಂತ್ರಸ್ತರಾದವರ ಮನೆಗಳಿಂದ ನಾವು ಸ್ಯಾಂಪಲ್  ​ಗಳನ್ನು ಸಂಗ್ರಹ ಮಾಡಿದ್ದು, ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಮೇಲೆ ಅವಘಡಕ್ಕೆ ಕಾರಣ ಗೊತ್ತಾಗಲಿದೆ. ಸದ್ಯಕ್ಕೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

Join Whatsapp