ಆಸ್ಟ್ರೇಲಿಯನ್‌ ಓಪನ್ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದು 2 ಕೋಟಿ ರೂ. ಬಹುಮಾನ ಪಡೆದ ಬೋಪಣ್ಣ!

Prasthutha|

ಮೆಲ್ಬೋರ್ನ್​: ಭಾರತದ ಹಿರಿಯ ಟೆನಿಸಿಗ, ಡಬಲ್ಸ್​ ವಿಶ್ವ ನಂ.1 ಆಟಗಾರ, ಕನ್ನಡಿಗ ರೋಹನ್​ ಬೋಪಣ್ಣ ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯ ಪರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಅವರಿಗೆ ಬಹುಮಾನವಾಗಿ ಎರಡು ಕೋಟಿ ದೊರೆತಿದೆ.

- Advertisement -

ಜಿದ್ದಾಜಿದ್ದಿನ ಪುರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಸೇರಿಕೊಂಡು ಇಟಲಿಯ ಸಿಮೋನ್​ ಬೊಲೆಲ್ಲಿ-ಆಯಂಡ್ರಿಯಾ ವಸಸ್ಸೊರಿ ವಿರುದ್ಧ 7-6(7-0), 7-5 ನೇರ ಸೆಟ್​ಗಳಿಂದ ಗೆಲುವು ಸಾಧಿಸಿದ್ದಾರೆ.

ಗ್ರ್ಯಾಂಡ್ ಸ್ಲಾಮ್ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ರೋಹನ್ ಬೋಪಣ್ಣ ಅವರ 61ನೇ ಪಂದ್ಯವಾಗಿತ್ತು. ಅವರು 19 ವಿಭಿನ್ನ ಪಾರ್ಟರ್ನರ್‌ಗಳ ಜೊತೆ ಡಬಲ್ಸ್‌ ಪಂದ್ಯ ಆಡಿದ್ದಾರೆ. ತಮ್ಮ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಪ್ರಶಸ್ತಿ ಗೆಲ್ಲುವ ಮುನ್ನ ರೋಹನ್‌ ಬೋಪಣ್ಣ ಅಮೆರಿಕದ ರಾಜೀವ್‌ ರಾಮ್‌ ಅವರ ಅಪರೂಪದ ದಾಖಲೆಯನ್ನು ಮುರಿದಿದ್ದರು. ರಾಜೀವ್‌ ರಾಮ್‌ ತಮ್ಮ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಪ್ರಶಸ್ತಿ ಗೆಲ್ಲಲು 58 ಪಂದ್ಯವಾಡಿದ್ದರೆ, ರೋಹನ್‌ ಬೋಪಣ್ಣ 61 ಪಂದ್ಯವಾಡುವ ಮೂಲಕ ಈ ದಾಖಲೆ ಮುರಿದಿದ್ದಾರೆ.

- Advertisement -

ರೋಹನ್ ಬೋಪಣ್ಣ ಎರಡು ಬಾರಿ ಅಮೆರಿಕನ್ ಓಪನ್ (2010, 2023) ಗ್ರ್ಯಾನ್‌ಸ್ಲಾಮ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದರು.43 ವರ್ಷದ ಬೋಪಣ್ಣ ವೃತ್ತಿಜೀವನದಲ್ಲಿ ಇದುವರೆಗೆ ಒಮ್ಮೆ ಮಾತ್ರ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದು, ಅದು ಮಿಶ್ರ ಡಬಲ್ಸ್ ವಿಭಾಗದಲ್ಲಿ ಆಗಿದೆ. ಪುರುಷರ ಡಬಲ್ಸ್​ನಲ್ಲಿ ಅವರು 2 ಬಾರಿ ಫೈನಲ್​ಗೇರಿದ್ದರೂ ರನ್ನರ್​ಅಪ್​ಗೆ ತೃಪ್ತಿಪಟ್ಟಿದ್ದರು. 3ನೇ ಪ್ರಯತ್ನದಲ್ಲಿ ಅವರಿಗೆ ಅದೃಷ್ಟ ಒಲಿಯುವುದೇ ಕಾದು ನೋಡಬೇಕಾಗಿದೆ.

Join Whatsapp