ಹಾವನ್ನು ಹುಡುಕಿ ಹೊರಟ ಪೊಲೀಸರಿಗೆ ಕಾದಿತ್ತು ಅಚ್ಚರಿ | 183 ನಾಯಿ, ಇಲಿ, ಪಕ್ಷಿ, ಹಾವು, ಮೊಲ ಫ್ರೀಝರ್‌ನಲ್ಲಿ ಪತ್ತೆ !

Prasthutha|

ವಿಚಿತ್ರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಹಲವರನ್ನು ನಾವು ನೋಡಿದ್ದೇವೆ. ಆದರೆ ಅಮೆರಿಕದ ಅರಿಜೋನಾದ ಮನೆಯೊಂದನ್ನು ಶೋಧಿಸಿದ ಪೊಲೀಸರು ಅಲ್ಲಿ ಸಿಕ್ಕಿರುವ ವಸ್ತುಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

- Advertisement -

ಸಂತಾನೋತ್ಪತ್ತಿಗಾಗಿ ಪಡೆದಿದ್ದ ಹಾವನ್ನು ಮರಳಿಸಿಲ್ಲ ಎಂದು ಮೊಹಾವೆ ಕೌಂಟಿಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಳು. ದೂರಿನಲ್ಲಿ ಹೆಸರಿಸಲಾಗಿದ್ದ ಮೈಕಲ್‌ ಪ್ಯಾಟ್ರಿಕ್‌ ಟುರ್ಲೆಂಡ್‌ (43), ಎಂಬ ವ್ಯಕ್ತಿಯ ಮನೆಗೆ ತೆರಳಿದ ಪೊಲೀಸರು ಮಹಿಳೆಯಿಂದ ಪಡೆದುಕೊಂಡ ಹಾವು ಹಾವು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಆದರೆ ಆತನ ನಡವಳಿಕೆಯಿಂದ ಸಂಶಯಗೊಂಡ ಪೊಲೀಸರು, ಪ್ಯಾಟ್ರಿಕ್‌ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಮನೆಯ ಹಿಂಬಂಧಿಯ ಗ್ಯಾರೇಜ್‌ನಲ್ಲಿ ಇರಿಸಲಾಗಿದ್ದ ದೊಡ್ಡ ಗಾತ್ರದ ಪ್ರೀಝರ್‌ ಪೊಲೀಸರ ಕಣ್ಣಿಗೆ ಬಿದ್ದಿದ್ದು, ತೆರೆದು ನೋಡಿದ ಪೊಲೀಸರು ಗಾಬರಿಯಾಗಿದ್ದಾರೆ.

ಫ್ರೀಝರ್‌ನಲ್ಲಿ 183 ನಾಯಿ, ಹಲ್ಲಿ, ಆಮೆ, ಹಾವು, ಮೊಲ, ಇಲಿ ಸೇರಿದಂತೆ ಹಲವು ಪ್ರಾಣಿಗಳು, ಪಕ್ಷಿಗಳು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರಲ್ಲಿ ಕೆಲ ಹಲ್ಲಿ, ಹಾವುಗಳು ಇನ್ನೂ ಜೀವಂತವಾಗಿತ್ತು. ಬಳಿಕ ಪೊಲೀಸರು ಎಲ್ಲಾ ಪ್ರಾಣಿಗಳನ್ನು ಹೊರತೆಗೆದಿದ್ದಾರೆ.

- Advertisement -

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೈಕಲ್ ಪ್ಯಾಟ್ರಿಕ್‌ನನ್ನು ಬಂಧಿಸಿದ್ದು, ಪ್ರಾಣಿ ಹಿಂಸೆಗೆ ಸಂಬಂಧಿಸಿದ 94 ಪ್ರಕರಣಗಳನ್ನು ಆತನ ಮೇಲೆ ದಾಖಲಿಸಿದ್ದಾರೆ. ಮತ್ತೊಂದೆಡೆ ಈತನ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲು ಯಾವುದೇ ವಕೀಲರು ಹಾಜರಾಗಿಲ್ಲ ಎಂದು ತಿಳಿದುಬಂದಿದೆ. ಕಳೆದ ಕೆಲ ಸಮಯಗಳಿಂದ ಜೀವಂತ ಪ್ರಾಣಿಗಳನ್ನು ಫ್ರೀಝರ್‌ನಲ್ಲಿಡುತ್ತಿದ್ದೆ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ  ಮೈಕಲ್ ಪ್ಯಾಟ್ರಿಕ್‌ ಒಪ್ಪಿಕೊಂಡಿದ್ದಾನೆ.

ಫ್ರೀಜರ್‌ನಲ್ಲಿ ಪತ್ತೆಯಾಗಿರುವ ಕೆಲ ಪ್ರಾಣಿಗಳನ್ನು ಮನೆಯ ಸುತ್ತ ಹಲವು ಬಾರಿ ನೋಡಿದ್ದೇನೆ. ಈ ಕುರಿತು ಪ್ರಶ್ನಿಸಿದಾಗ ಪ್ಯಾಟ್ರಿಕ್‌ ಬೇರೆ ಬೇರೆ ನೀಡಿದ್ದ ಎಂದು ಮನೆ ಮಾಲೀಕ ಪ್ರತಿಕ್ರಯಿಸಿದ್ದಾರೆ. ಇದೀಗ ಸತ್ಯ ಹೊರಬಂದಿದ್ದು, ಆತನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.



Join Whatsapp