ಮನೆಗೆ ನುಗ್ಗಿದ ದರೋಡೆಕೋರರನ್ನು 12 ವರ್ಷದ ಪೋರ ಎದುರಿಸಿದ್ದು ಹೇಗೆ ಗೊತ್ತೇ?

Prasthutha|

- Advertisement -

ನಾರ್ತ್ ಕರೋಲಿನಾ : ತನ್ನ ಮನೆಗೆ ನುಗ್ಗಿದ ದರೋಡೆಕೋರನನ್ನು 12 ವರ್ಷದ ಬಾಲಕ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಅಮೆರಿಕಾದ ನಾರ್ತ್ ಕರೋಲಿನಾದ ಸೌತ್ ವಿಲಿಯಂ ಸ್ಟ್ರೀಟ್ ನಲ್ಲಿ ನಡೆದಿದೆ.

ಮನೆಗೆ ನುಗ್ಗಿದ ದರೋಡೆಕೋರರು ಹಣ ಕೇಳುತ್ತಾ ಬಾಲಕನ ಅಜ್ಜಿ ಎಲ್ಲಿಸ್(78)ಗೆ ಗುಂಡುಹಾರಿಸಿದಾಗ ಮನೆಯಲ್ಲಿದ್ದ ರಿವಾಲ್ವರ್ ತೆಗೆದು ಬಾಲಕ ದರೋಡಕಾರರಿಗೆ ಗುಂಡು ಹಾರಿಸಿದ್ದಾನೆ. ಇಬ್ಬರು ದರೋಡೆಕೋರರಿಗೆ ಗುಂಡೇಟು ತಗುಲಿದ್ದು ಅದರಲ್ಲೊಬ್ಬ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಕಾಡಿದಾಗ ಒಬ್ಬ ವ್ಯಕ್ತಿ ಗುಂಡೇಟು ತಗುಲಿ ಬಿದ್ದಿರುವುದು ಕಂಡು ಬಂದಿದೆ. ನಂತರ ಅವನನ್ನು ಆಸ್ಪತ್ರೆಗೆ ಸಾಗಿಸಿದರೂ ಅವನು ಬದುಕುಳಿಯಲಿಲ್ಲ.

- Advertisement -

ಕಾಲಿಗೆ ಗುಂಡೇಟು ತಗುಲಿರುವ ಅಜ್ಜಿ ಎಲ್ಲಿಸ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕನ ವಿವರವನ್ನು ಬಹಿರಂಗಪಡಿಸದ ಪೊಲೀಸರು ಆತ್ಮರಕ್ಷಣೆಗಾಗಿ ಬಾಲಕ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ.  

Join Whatsapp