ರೈತರ ಪ್ರತಿಭಟನೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ ಬಿಜೆಪಿ ನಾಯಕರ 12 ಹೇಳಿಕೆಗಳು !

Prasthutha|

ನವದೆಹಲಿ: ಶುಕ್ರವಾರ ಬೆಳಿಗ್ಗೆ ಪ್ರಧಾನಿ ಮೋದಿಯವರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಹೇಳಿಕೆ ನೀಡಿದ್ದಾರೆ. “ಈ ಕಾಯ್ದೆಗಳಿಂದ ರೈತರಿಗಾಗುವ ಅನುಕೂಲಗಳನ್ನು ಮನದಟ್ಟು ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ” ಎಂದು ಈ ವೇಳೆ ಪ್ರಧಾನಿ ಅಲವತ್ತುಕೊಂಡರು.
ಪ್ರಧಾನಿಯವರ ಈ ಹೇಳಿಕೆ ರೈತರ ಮೇಲೆ ಪರಿಣಾಮ ಇನ್ನೂ ಬೀರಿಲ್ಲ. ಒಂದು ವರ್ಷದಿಂದ ರೈತರು ಈ ಸಂಬಂಧ ಪ್ರತಿಭಟಿಸುತ್ತಿದ್ದರೆ ಪ್ರಧಾನಿ ಅತ್ತ ಇಣುಕಿಯೂ ನೋಡಿಲ್ಲ. ಬಿಜೆಪಿಯವರಂತೂ ರೈತರಿಕೆ ಬೆದರಿಕೆಯನ್ನೂ ಹಾಕುತ್ತಿದ್ದರು.

- Advertisement -


ಪ್ರತಿಭಟನಾನಿರತ ರೈತರ ಬಗ್ಗೆ ಬಿಜೆಪಿಯವರು ಹೇಳಿದವುಗಳಲ್ಲಿ 12 ಹೇಳಿಕೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಆದ್ದರಿಂದಲೇ ಮೋದಿ ಹೇಳಿಕೆ ರೈತರ ಮನಸ್ಸು ತಟ್ಟಿಲ್ಲ. ಮುಖ್ಯವಾಗಿ ಪ್ರತಿಭಟಿಸುತ್ತಿರುವವರು ರೈತರೇ ಅಲ್ಲ, ಪಟ್ಟಭದ್ರ ಹಿತಾಸಕ್ತಿಗಳು ಎಂದು ಬಿಜೆಪಿಯವರು ಮಾನಹಾನಿಕರ ಹೇಳಿಕೆ ನೀಡಿದ್ದರು.ರೈತ ಹೋರಾಟಗಾರರತ್ತ ಬಿಜೆಪಿ ನಾಯಕರ ಸಾಮಾನ್ಯ ನೋಟವನ್ನು ಈ ಪಟ್ಟಿ ಗಟ್ಟಿ ಮಾಡುತ್ತದೆ.


1 ನಿಮ್ಮನ್ನು ಶಿಸ್ತಿನೊಳಕ್ಕೆ ತರಲು ಎರಡು ನಿಮಿಷ ಸಾಕು- ಅಜಯ್ ಕುಮಾರ್ ಮಿಶ್ರಾ.
ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಹೇಳಿಕೆಗಳು ಭಾರೀ ವಿವಾದ ಸೃಷ್ಟಿಸಿದವು. “ನನ್ನನ್ನು ಎದುರಿಸಿ, ನಿಮ್ಮನ್ನು ಶಿಸ್ತಿಗೊಳಪಡಿಸಲು ಎರಡು ನಿಮಿಷ ಸಾಕು. ನಾನು ಮಂತ್ರಿ, ಸಂಸದ ಎಂಬುದೆಲ್ಲಕ್ಕಿಂತಲೂ ಮೊದಲು ಜನರಿಗೆ ಗೊತ್ತಿರುವವನು, ಸವಾಲು ಸ್ವೀಕರಿಸದೆ ಓಡಿ ಹೋಗುವವನಲ್ಲ. ನಾನು ಸವಾಲು ಸ್ವೀಕರಿಸಿದ ಕೂಡಲೆ ನೀವು ಪಲಿಯ ಮಾತ್ರವಲ್ಲ, ನನ್ನ ಕ್ಷೇತ್ರ ಲಖಿಂಪುರ ಸುತ್ತಿನಿಂದಲೇ ಓಡಿ ಹೋಗುತ್ತೀರಿ.” ಲಖಿಂಪುರ ಕೇರಿಯಲ್ಲಿ ಮಿಶ್ರಾ ಅವರ ಮಗ ಹಿಂಸಾಚಾರಕ್ಕೆ ಕಾರಣನಾದ ಮೇಲೆ ಅವರ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸವಾಯಿತು. ರೈತರ ಹೇಳಿಕೆಯಂತೆ ಆಶಿಸ್ ಮಿಶ್ರಾ ಕಾರು ನುಗ್ಗಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿದ್ದು, ಆಶಿಸ್ ಈಗ ಕಸ್ಟಡಿಯಲ್ಲಿದ್ದಾರೆ, ತಂದೆ ಮೋದಿ ಸಂಪುಟದಲ್ಲಿ ಸಚಿವರಾಗಿ ಮುಂದುವರಿದಿದ್ದಾರೆ.

  1. ಜಸ್ ಕೌರ್ ಮೀನಾ- ಪ್ರತಿಭಟನಕಾರರು ಖಲಿಸ್ತಾನಿ ಉಗ್ರಗಾಮಿಗಳು.
    ವಿದೇಶದ ಖಲಿಸ್ತಾನಿಗಳ ಬೆಂಬಲದಿಂದ ರೈತರ ಹೋರಾಟ ನಡೆದಿದೆ ಎಂದು ಬಿಜೆಪಿ ನಾಯಕರು ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಅಂಥವರಲ್ಲಿ ಯಾವುದೇ ಸಾಕ್ಷ್ಯ ನೀಡದೆ ಅಂಥ ಹೇಳಿಕೆ ನೀಡಿದವರೆಂದರೆ ರಾಜಸ್ತಾನದ ದಾವುಸಾ ಸಂಸದ ಜಸ್ ಕೌರ್ ಮೀನಾ. ರೈತ ಹೋರಾಟಗಾರರು ಎಕೆ 47 ರೈಫಲ್ಸ್ ಹೊಂದಿದ್ದಾರೆ ಎಂದೂ ಮೀನಾ ಹೇಳಿದ್ದರು.
    “ಈ ಕೃಷಿ ಕಾಯ್ದೆಯನ್ನೇ ನೋಡಿರಿ, ಈ ಕಾಯ್ದೆ ವಿರೋಧಿಸಿ ಉಗ್ರಗಾಮಿಗಳು ಹೋರಾಡುತ್ತಿದ್ದಾರೆ; ಅವರು ಎಕೆ 47 ಗನ್ ಗಳನ್ನು ಹೊಂದಿದ್ದಾರೆ, ಖಲಿಸ್ತಾನದ ಬಾವುಟ ಹಾರಿಸುತ್ತಿದ್ದಾರೆ” ಎಂಬ ಮೀನಾರ ಈ ಹೇಳಿಕೆಯ ವೀಡಿಯೋವನ್ನು ರಾಜಸ್ತಾನ ಬಿಜೆಪಿ ಪಕ್ಷದ ಅಧಿಕೃತ ಜಾಲ ತಾಣದಲ್ಲೇ ಹಾಕಲಾಗಿದೆ.
    3 ಅಮಿತ್ ಮಾಳವೀಯ- ಹೋರಾಟಗಾರರು ಖಲಿಸ್ತಾನಿಗಳು ಮತ್ತು ಮಾವೋವಾದಿಗಳು.
    ಬಿಜೆಪಿ ಐಟಿ ಸೆಲ್ ನ ಮಾಳವೀಯ ಅವರು ಸಹ ಅದನ್ನೇ ಹೇಳಿದರು. ಪ್ರತಿಭಟಿಸುತ್ತಿರುವ ರೈತರಿಗೆ ಖಲಿಸ್ತಾನಿಗಳ ಮತ್ತು ಮಾವೋವಾದಿಗಳ ಸಂಪರ್ಕವಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರೀವಾಲರು ರೈತರನ್ನು ಬೆಂಬಲಿಸಿದಾಗ, ಕೇಜ್ರೀವಾಲರು ದೆಹಲಿಯನ್ನು ಬೂದಿ ಮಾಡುತ್ತಾರೆ ಎಂದೂ ಮಾಳವೀಯ ಹೇಳಿದ್ದರು.
    ಆದರೆ ಅರವಿಂದ ಕೇಜ್ರೀವಾಲ್ ಅವರ ಸರಕಾರವು ನವೆಂಬರ್ ನಲ್ಲಿ ಕೃಷಿ ಕಾಯ್ದೆಗಳ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಅದರ ಜಾರಿಗೆ 23ನೇ ತಾರೀಕು ಗೊತ್ತು ಪಡಿಸಿದೆ.
    ಈಗ ಅದನ್ನು ವಿರೋದಿಸಲು ಖಲಿಸ್ತಾನಿಗಳು, ಮಾವೋವಾದಿಗಳು ಮುಂದೆ ಬಂದಿದ್ದಾರೆ, ಕೇಜ್ರೀವಾಲರು ದೆಹಲಿಯನ್ನು ಬೂದಿ ಮಾಡುವವರೇ!
    4 ವೈ. ಸತ್ಯಕುಮಾರ್- ಗೂಂಡಾಗಳು ರೈತರ ವೇಷದಲ್ಲಿದ್ದಾರೆ.
    ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸತ್ಯಕುಮಾರ್ ಅವರು ಪ್ರತಿಭಟನಾನಿರತ ರೈತರನ್ನು ಗೂಂಡಾಗಳು ಎಂದು ಕರೆದರು. ಅಲ್ಲದೆ ಪ್ರತಿಭಟನಾ ನಿರತರನ್ನು ಖಲಿಸ್ತಾನಿಗಳು ಮತ್ತು ಜಿಹಾದಿಗಳು ಎಂದೂ ಸತ್ಯಕುಮಾರ್ ಹೇಳಿಕೆ ನೀಡಿದರು.
    “ಉತ್ತರ ಪ್ರದೇಶದಲ್ಲಿ ರೈತರ ಪ್ರತಿಭಟನೆ ಯಾವ ರೀತಿ ನಡೆದಿದೆಯೆಂದರೆ ಗೂಂಡಾಗಳು ಮೊದಲೇ ಎಲ್ಲ ರೀತಿಯಿಂದಲೂ ತಯಾರಿ ನಡೆಸಿ, ಹಿಂಸೆಯ ಪ್ರಯೋಗ ನಡೆಸಿದ್ದಾರೆ.” ಎಂದು ಟ್ವೀಟ್ ಮಾಡಿದ್ದ ಅವರು ಜಿಹಾದಿ ಮತ್ತು ಖಲಿಸ್ತಾನಿಗಳು ಎಂದು ಆರೋಪ ಮಾಡಿದ್ದರು.
    5 ದುಷ್ಯಂತಕುಮಾರ್ ಗೌತಮ್- ಉಗ್ರಗಾಮಿಗಳು ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದಾರೆ.
    ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರಾಖಂಡದ ಉಸ್ತುವಾರಿ ದುಷ್ಯಂತ್ ಕುಮಾರ್ ಗೌತಮ್, ಅಂಥ ಯಾವುದೇ ವರದಿ ಇಲ್ಲದಿದ್ದರೂ, ಪ್ರತಿಭಟನಾ ನಿರತ ರೈತರು ಖಲಿಸ್ತಾನ ಪರ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
    “ಕೃಷಿ ಕಾಯ್ದೆಗಳನ್ನು ಇಡೀ ದೇಶಕ್ಕಾಗಿ ತರಲಾಗಿದೆ, ಪಂಜಾಬಿನಲ್ಲಿ ಮಾತ್ರ ಪ್ರತಿಭಟನೆ ಏಕೆ? ಪ್ರತಿಭಟನೆಯ ನಡುವೆ ಖಲಿಸ್ತಾನ್ ಜಿಂದಾಬಾದ್, ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗಿದ್ದಾರೆ. ಹಾಗಿರುವಾಗ ಅದನ್ನು ರೈತರ ಪ್ರತಿಭಟನೆ ಎಂದು ಹೇಗೆ ಹೇಳುವುದು? ಅವರು ದೇಶದ್ರೋಹಿಗಳೊಂದಿಗೆ ಸೇರಿಕೊಂಡಿದ್ದಾರೆ, ಉಗ್ರಗಾಮಿಗಳು ಹೋರಾಟವನ್ನು ಹೈಜಾಕ್ ಮಾಡಿದ್ದಾರೆ” ಎಂದು ಗೌತಮ್ ಹೇಳಿದ್ದಾರೆ.
    6 ಮನೋಹರಲಾಲ್ ಖಟ್ಟರ್- ಅನಗತ್ಯದ ಅಂಶಗಳು
    ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ “ಅಲ್ಲಿ ಎಲ್ಲ ಖಲಿಸ್ತಾನದ ಪರ ಘೋಷಣೆ ಕೂಗುವ ಅನಗತ್ಯದ ಅಂಶಗಳಿವೆ.” ಅಲ್ಲದೆ “ನಾವು ಇಂದಿರಾ ಗಾಂಧಿಯವರನ್ನು ಕೊಂದವರು, ಯಾಕೆ ನರೇಂದ್ರ ಮೋದಿಯವರನ್ನು ಮುಗಿಸಲಾಗದೇ. ಈ ಅನಗತ್ಯದ ಅಂಶಗಳು ಎಲ್ಲವನ್ನು ಸರಕಾರ ಗಮನಿಸುತ್ತಿದೆ, ಇವುಗಳಿಂದ ಏನೂ ಆಗದು” ಎಂದಿದ್ದರು.
    7 ಸುಶೀಲ್ ಕುಮಾರ್ ಮೋದಿ- ತುಕ್ಡೆ ತುಕ್ಡೆ ಗ್ಯಾಂಗ್ ಪ್ರತಿಭಟನೆಯನ್ನು ಹೈಜಾಕ್ ಮಾಡಿದೆ.
    ಬಿಹಾರದ ಹಿಂದಿನ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರು ತುಕ್ಡೆ ತುಕ್ಡೆ ಗ್ಯಾಂಗಿನವರು ಹೋರಾಟವನ್ನು ಹೈಜಾಕ್ ಮಾಡಿದ್ದಾರೆ ಎಂದು ಹೇಳಿದರು. ಈ ಗ್ಯಾಂಗ್ ದೇಶದಲ್ಲಿ ನಡೆದಿರುವ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಸಿಎಎ ಪ್ರತಿಭಟನೆಯಲ್ಲೂ ತೂರಿಕೊಂಡಿತ್ತು ಎಂದೂ ಅವರು ಹೇಳಿದ್ದರು.
    “ದೆಹಲಿ ಬಳಿ ರೈತರ ಹೋರಾಟದಲ್ಲಿ ಎಂತೆಂಥ ಘೋಷಣೆಗಳು ಹೊರ ಬಿದ್ದವೆಂದರೆ ಇದು ತುಕ್ಡೆ ತುಕ್ಡೆ ಗ್ಯಾಂಗ್ ಶಾಹಿನ್ ಬಾಗ್ ನಲ್ಲಿ ನಡೆಸಿದ ಹೋರಾಟದ ಮಾದರಿಯಾಗಿದೆ. ಸಿಎಎ ವಿರೋಧಿ ಹೋರಾಟದ ಎಲ್ಲ ಬಲಗಳನ್ನು ಇಲ್ಲಿ ತಿರುಗಿಸಿ ಹೂಡಲಾಗಿದೆ” ಎಂದು ಮೋದಿ ಟ್ವೀಟ್ ಮಾಡಿದ್ದರು.
    8 ಬಿ. ಎಲ್. ಸಂತೋಷ್- ಅರಾಜಕತೆಯ ವಿನ್ಯಾಸಕ್ಕಾಗಿ ಸೇರಿರುವ ಗಿನಿಯಾ ಹಂದಿಗಳು.
    ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಪ್ರಕಾರ ರೈತರು ಅವರ ಬುದ್ಧಿಯಿಂದ ಪ್ರತಿಭಟನೆ ನಡೆಸಿಲ್ಲ. ಮೇಧಾ ಪಾಟ್ಕರ್, ಆಮ್ ಆದ್ಮಿ ಪಕ್ಷದವರು ಮೊದಲಾದವರೆಲ್ಲ ಇದರಲ್ಲಿ ಸೇರಿಕೊಂಡಿದ್ದಾರೆ. “ಅರಾಜಕತೆಯ ವಿನ್ಯಾಸಕಾರರ ಕೈಗೆ ರೈತರು ಸಿಕ್ಕಿ ಬೀಳದಂತೆ ನೋಡಿಕೊಳ್ಳಿ” ಎಂದು ಅವರು ಟ್ವೀಟ್ ಮಾಡಿದ್ದರು.
    ಆಮ್ ಆದ್ಮಿ ಪಕ್ಷವಲ್ಲದೆ, ಖಲಿಸ್ತಾನವಾದಿಗಳೂ ಇದರಲ್ಲಿ ತೂರಿಕೊಂಡಿದ್ದಾರೆ, ರೈತರಲ್ಲದ ಯೋಗೇಂದ್ರ ಯಾದವ್ ಮೊದಲಾದ ಅರಾಜಕವಾದಿಗಳಿಗೆ ರೈತರ ಹೋರಾಟದಲ್ಲಿ ಏನು ಕೆಲಸ ಎಂದಿತ್ಯಾದಿಯಾಗಿ ಸಂತೋಷ್ ಟ್ವೀಟ್ ಮಾಡಿದ್ದರು.
    9 ಪೀಯೂಶ್ ಗೋಯಲ್- ಎಡವಾದಿ, ಮಾವೋವಾದಿ ಶಕ್ತಿಗಳು ನುಸುಳಿಕೊಂಡಿವೆ.
    ಪ್ರತಿಭಟನೆ ಆರಂಭವಾದಾಗಲೇ ಕೇಂದ್ರ ಮಂತ್ರಿ ಪಿಯೂಶ್ ಗೋಯಲ್ ಅವರು, ಇದು ರೈತರು ನಡೆಸುತ್ತಿರುವ ಹೋರಾಟವಲ್ಲ, ಎಡಪಂಥೀಯರು ಮತ್ತು ಮಾವೋವಾದಿಗಳು ಇದರೊಳಗೆ ತೂರಿಕೊಂಡಿದ್ದಾರೆ. ಅವರು ರೈತರ ಪರವಾಗಿ ಹೋರಾಟದಲ್ಲಿ ಸೇರಿಕೊಂಡಿಲ್ಲ, ಜೈಲಿನಲ್ಲಿರುವ ತಮ್ಮವರನ್ನು ಬಿಡಿಸಿಕೊಳ್ಳಲು ರೈತ ಹೋರಾಟದೊಳಕ್ಕೆ ತೂರಿಕೊಂಡಿದ್ದಾರೆ ಎಂದು ಗೋಯಲ್ ಹೇಳಿದ್ದರು.
    “ರೈತರ ಹೋರಾಟ ಎನ್ನುವುದು ಅದು ರೈತರದಾಗಿ ಉಳಿದಿಲ್ಲ ಎಂದು ನಮಗೀಗ ಗೊತ್ತಾಗಿದೆ. ಅಲ್ಲಿ ಜೈಲಲ್ಲಿರುವ ಎಡಪಂಥೀಯರ ಬಿಡುಗಡೆಗೆ ಬೇಡಿಕೆ ಬರುತ್ತಿರುವುದನ್ನು ಗಮನಿಸುತ್ತಿದ್ದೇನೆ.” ಎಂದು ರೈಲ್ವೆ ಮಂತ್ರಿ ಹೇಳಿದ್ದರು.
  1. 10. ರವಿ ಶಂಕರ್ ಪ್ರಸಾದ್- ಅನಿಷ್ಟದ ವಿನ್ಯಾಸ
    ರೈತರ ಹೋರಾಟವನ್ನು ಹಳಿಯುವ ಬಿಜೆಪಿಯ ಪಡೆಯಲ್ಲಿ ಕೇಂದ್ರ ಕಾನೂನು ಮಂತ್ರಿ ರವಿ ಶಂಕರ್ ಪ್ರಸಾದ್ ಸಹ ಹಿಂದುಳಿಯಲಿಲ್ಲ. ತುಕ್ಡೆ ತುಕ್ಡೆ ಗ್ಯಾಂಗ್ ಅಲ್ಲದೆ ಅನಿಷ್ಟದ ಸ್ತೂಲ ಕಲ್ಪನೆಯು ಇದರಲ್ಲಿ ಸೇರಿಕೊಂಡಿದೆ. ಆ ಕಾರಣಕ್ಕಾಗಿಯೇ ಒಕ್ಕೂಟ ಸರಕಾರ ಮತ್ತು ರೈತರ ನಡುವಣ ಮಾತುಕತೆ ವಿಫಲವಾಗುತ್ತಿದೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದ್ದರು.
    11 ರಾವ್ ಸಾಹೇಬ್ ದಣ್ವೆ- ಪ್ರತಿಭಟನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನದ ಕೈವಾಡವಿದೆ.
    ರಸ್ತೆಯಲ್ಲಿ ಪ್ರತಿಭಟಿಸುತ್ತಿರುವವರು ರೈತರಲ್ಲ ಎಂದು ನಂಬಿಸಲು ಪ್ರಯತ್ನಿಸಿದವರು ಇನ್ನೊಬ್ಬ ಕೇಂದ್ರ ಮಂತ್ರಿ ರಾವ್ ಸಾಹೇಬ್ ದಣ್ವೆ.
    “ಈಗ ನಡೆಯುತ್ತಿರುವ ಪ್ರತಿಭಟನೆ ರೈತರದಲ್ಲ. ಇದರಲ್ಲಿ ಚೀನಾ ಮತ್ತು ಪಾಕಿಸ್ತಾನಗಳ ಕೈವಾಡವಿದೆ. ಇದಕ್ಕೆ ಕಿಚ್ಚು ಹಚ್ಚುತ್ತಿರುವವರು ಮುಸ್ಲಿಮರು. ರೈತರ ಪ್ರತಿಭಟನೆಯೊಳಗೆ ಎನ್ ಆರ್ ಸಿ- ಮತ್ತು ಸಿಎಎ ವಿರೋಧಿಸಿದ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರತಿಭಟನೆಯ ಶಾಹಿನ್ ಬಾಗ್ ತುಕ್ಡೆ ತುಕ್ಡೆ ಗ್ಯಾಂಗು ಈಗ ಇಲ್ಲಿ ಶಾಹಿನ್ ಬಾಗ್ -2 ಪ್ರಯೋಗ ನಡೆಸಿವೆ” ಎಂದು ದಣ್ವೆ ಹೇಳಿದರು.
  2. 12. ಮನೋಜ್ ತಿವಾರಿ- ಚೆನ್ನಾಗಿ ಯೋಜಿಸಿ ನಡೆಸಿದ ಸಂಚು. ತುಕ್ಡೆ ತುಕ್ಡೆ ಗ್ಯಾಂಗ್ ಹೇಳಿಕೆಗೆ ತಾನೂ ಅಂಟಿಕೊಂಡ ದೆಹಲಿ ಸಂಸದ ಮನೋಜ್ ತಿವಾರಿಯವರು ಅದಕ್ಕೆ ಇದು ಚೆನ್ನಾಗಿ ಯೋಜಿಸಿ ಮಾಡಿರುವ ಸಂಚು ಎಂದು ತನ್ನ ವಾಕ್ಯವನ್ನೂ ಸೇರಿಸಿದರು.
    ಬಿಜೆಪಿ ಬೆಂಬಲಿಗರು ಈಗಲೂ ರೈತರ ಹೋರಾಟವನ್ನು ಬಾಡಿಗೆಯ ಇಲ್ಲವೇ ಇತರ ಪ್ರಚೋದಕರ ಹೋರಾಟ ಎಂದು ಹೇಳುವುದನ್ನು ನಿಲ್ಲಿಸಿಲ್ಲ. ಅದರ ನಡುವೆ ಕೃಷಿ ಕಾಯ್ದೆ ಹಿಂಪಡೆವ ಹೇಳಿಕೆಯನ್ನು ಪ್ರಧಾನಿ ನೀಡಿದ್ದಾರೆ. ಅದು ಸದ್ಯ ಸೋಜಿಗದ ಸಂಗತಿ.
Join Whatsapp