ಕೃಷಿ ಕಾಯ್ದೆಗಳ ರದ್ದತಿ, ದುರಹಂಕಾರ ಮತ್ತು ಸರ್ವಾಧಿಕಾರದ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟದ ಗೆಲುವು : ಪಾಪ್ಯುಲರ್ ಫ್ರಂಟ್

Prasthutha|

ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಪ್ರಧಾನ ಮಂತ್ರಿ ಯವರ ಘೋಷಣೆ ದೇಶದಲ್ಲಿ ವರ್ಷಪೂರ್ತಿ ನಡೆದ ರೈತರ ಪ್ರಜಾಸತ್ತಾತ್ಮಕ ಹೋರಾಟದ ಗೆಲುವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿದ್ದಾರೆ.

- Advertisement -

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮ ಮತ್ತು ಅವರ ಇಚ್ಛೆಯನ್ನು ಯಾವತ್ತೂ ತಿರಸ್ಕರಿಸಲಾಗದು ಎಂದು ಮೋದಿ ಸರಕಾರಕ್ಕೆ ಮತ್ತೊಮ್ಮೆ ನೆನಪಿಸಲಾಗಿದೆ ಎಂದು ಅವರು ಹೇಳಿದರು. ರೈತರ ಐತಿಹಾಸಿಕ ಹೋರಾಟವು ಅಂತಿಮವಾಗಿ ದುರಂಹಕಾರ ಮತ್ತು ಸರ್ವಾಧಿಕಾರದ ಮೇಲೆ ತನ್ನ ಗೆಲುವನ್ನು ಸಾಧಿಸಿದೆ.
ಕ್ರೂರ ವಿಧಾನಗಳ ಹೊರತಾಗಿಯೂ, ರೈತ ಸಂಘಟನೆಗಳು ತಮ್ಮ ಹೆಜ್ಜೆಯನ್ನು ಎಂದೂ ಹಿಂದಿಟ್ಟಿಲ್ಲ ಮತ್ತು ಬಿಜೆಪಿಯ ದುರಂಹಕಾರವನ್ನು ಮಂಡಿಯೂರಿಸಲು ಸುಮಾರು ಒಂದು ವರುಷದ ವರೆಗೆ ತಮ್ಮ ಹೋರಾಟವನ್ನು ಜಾರಿಯಲ್ಲಿಟ್ಟವು.

ವಾಸ್ತವದಲ್ಲಿ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಗೆ ಮುನ್ನ ಘೋಷಣೆ ಹೊರಬಿದ್ದಿರುವುದು ಕಾಕತಾಳೀಯವೇನಲ್ಲ. ರೈತರ ಜೀವ ಮತ್ತು ದೇಶದ ಜನರ ಹಿತಕ್ಕಿಂತ ಹೆಚ್ಚು ಚುನಾವಣಾ ಗೆಲುವು ಮತ್ತು ಅಧಿಕಾರವೇ ತನ್ನ ಆದ್ಯತೆಯಾಗಿದೆ ಮತ್ತ ಇದನ್ನು ಗಳಿಸಲು ತಾನು ಯಾವ ಮಟ್ಟಕ್ಕೂ ಹೋಗಬಹುದು ಎಂಬುದನ್ನು ಈ ಸರಕಾರವು ಮತ್ತೇ ಮತ್ತೇ ಸಾಬೀತುಪಡಿಸಿದೆ.ಕಾನೂನುಗಳ ಹಿಂಪಡೆಯುವಿಕೆಯು, ಈ ಕಾನೂನುಗಳನ್ನು ಕೃಷಿಕರು ಎಂದೂ ಸ್ವೀಕರಿಸಲಿಲ್ಲ ಮತ್ತು ಇವು ದೇಶದ ನಿಕಟ ಬಂಡವಾಳಶಾಹಿಗಳ ಸಣ್ಣ ವರ್ಗಕ್ಕೆ ಲಾಭ ತಂದುಕೊಡುವ ಉದ್ದೇಶವನ್ನಷ್ಟೇ ಹೊಂದಿದ್ದವು ಎಂಬುದನ್ನು ಕೂಡ ನಿಸ್ಸಂಶಯವಾಗಿ ಸಾಬೀತುಪಡಿಸಿದೆ.ಹೋರಾಟನಿರತ ರೈತರ ಮೇಲೆ ಪೊಲೀಸರು ಮತ್ತು ಬಲಪಂಥೀಯ ಗುಂಪುಗಳು ನಡೆಸಿದ ದೌರ್ಜನ್ಯವು ಎಂದೂ ಮರೆಯಲಾಗದು.

- Advertisement -

ರೈತರ ಉಳಿದ ಬೇಡಿಕೆ ಈಡೇರುವವರೆಗೆ ಮತ್ತು ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಜೀವ ಕಳೆದುಕೊಂಡವರಿಗೆ ನ್ಯಾಯ ದೊರಕುವ ವರೆಗೂ ರೈತರ ಹೋರಾಟಕ್ಕೆ ದೇಶವು ತನ್ನ ಬೆಂಬಲವನ್ನು ಮುಂದುವರಿಸಬೇಕಾಗಿದೆ.ಈ ಗೆಲುವಿನಲ್ಲಿ ಇತರ ಹಿಂದುಳಿದ ವರ್ಗಗಳಿಗೆ, ತಮ್ಮ ಹಕ್ಕುಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಸಿಎಎ/ಎನ್.ಆರ್.ಸಿಯಂತಹ ತಾರತಮ್ಯದ ಹಾಗೂ ಅಪ್ರಜಾಸತ್ತಾತ್ಮಕ ಕ್ರಮಗಳನ್ನು ಹೇಗೆ ಸೋಲಿಸಬಹುದೆಂಬ ಪಾಠವಿದೆ.

Join Whatsapp