ನಿರುದ್ಯೋಗ । ಮಧ್ಯಪ್ರದೇಶದಲ್ಲಿ 15 ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ 11 ಸಾವಿರ ಆಕಾಂಕ್ಷಿಗಳು !

Prasthutha|

ಭೋಪಾಲ್: ಚಾಲಕ , ವಾಚ್ ಮೆನ್ ಗಳ ಹದಿನೈದು ಹುದ್ದೆಗಳಿಗಾಗಿ ಸುಮಾರು 11 ಸಾವಿರ ನಿರುದ್ಯೋಗಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುವ ಘಟನೆ ಮಧ್ಯ ಪ್ರದೇಶದಿಂದ ವರದಿಯಾಗಿದೆ. ಈ ಹುದ್ದೆಯ ಸಂದರ್ಶನಕ್ಕಾಗಿ ನೆರೆಯ ಉತ್ತರ ಪ್ರದೇಶದಿಂದ ಕೂಡ ಆಗಮಿಸಿದ್ದರು. ಇದು ದೇಶದೆಲ್ಲೆಡೆ ನಿರುದ್ಯೋಗ ಸಮಸ್ಯೆಗೆ ಜ್ವಲಂತ ಉದಾಹರಣೆ ಎಂಬುದು ಸ್ಪಷ್ಟವಾಗಿದೆ.

- Advertisement -

ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿತ್ತು. ಆದರೆ ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಜಿನಿಯರ್, MBA ಪದವೀಧರರು ಮತ್ತು ಸಿವಿಲ್ ನ್ಯಾಯಾಧೀಶರ ಹುದ್ದೆಯ ಆಕಾಂಕ್ಷಿಗಳು ಕೂಡ ಅರ್ಜಿ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಅಭ್ಯರ್ಥಿಗಳಲ್ಲಿ ಒಬ್ಬರಾದ ಅಜಯ್ ಬಾಘೇಲ್ ವಿಜ್ಞಾನ ಪದವೀಧರನಾಗಿದ್ದು, ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಪಿ.ಎಚ್.ಡಿ ಪದವೀಧರರು ಸರತಿ ಸಾಲಿನಲ್ಲಿದ್ದರು ಎಂದು ಹೇಳಲಾಗಿದೆ.

- Advertisement -

ಇತ್ತೀಚೆಗೆ ಸರ್ಕಾರಿ ನೇಮಕಾತಿ ಕುರಿತು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬೃಹತ್ ಜನ ಸಮೂಹ ಪ್ರಶ್ನಿಸಿತ್ತು.

ಮಧ್ಯಪ್ರದೇಶದ ಉದ್ಯೋಗ ನೋಂದಣಿ ಕಚೇರಿಗಳಲ್ಲಿ ಒಟ್ಟು ನಿರುದ್ಯೋಗಿಗಳ ಸಂಖ್ಯೆ 32,57,136. ಇದರಲ್ಲಿ ಶಿಕ್ಷಣ ಇಲಾಖೆಯಲ್ಲಿ 30,600, ಗೃಹ ಇಲಾಖೆಯಲ್ಲಿ 9,388, ಆರೋಗ್ಯ ಇಲಾಖೆಯಲ್ಲಿ 8,592 ಮತ್ತು ಕಂದಾಯ ಇಲಾಖೆಯಲ್ಲಿ 9,530 ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಒಂದು ಲಕ್ಷ ಹುದ್ದೆಗಳು ಖಾಲಿ ಇವೆ.

ಸರ್ಕಾರದ ಇತ್ತೀಚಿನ ಬೀದಿ ವ್ಯಾಪಾರಿ ಯೋಜನೆಗೆ 15 ಲಕ್ಷ ಅರ್ಜಿಗಳು ಬಂದಿವೆ. ಆಯ್ಕೆಯಾದ 99,000 ರ ಪೈಕಿ ಶೇಕಡಾ 90 ಮಂದಿ ಪದವೀಧರರಾಗಿದ್ದಾರೆ.

ಈ ಮಧ್ಯೆ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಕಳೆದ ವರ್ಷ 95 ಮಂದಿ ನಿರುದ್ಯೋಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬಹಿರಂಗವಾಗಿದೆ.

Join Whatsapp