ಬೆಂಗಳೂರು: ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆಯಿಂದಾಗಿದ್ದ ಅವಘಡದ ನಂತರ 108 ಆಂಬುಲೆನ್ಸ್ ಸೇವೆ ಸ್ಥಗಿತವಾಗಿದ್ದು #40PercentSarkara ದ ಅಯೋಗ್ಯತನಕ್ಕೆ ಸಾಕ್ಷಿ. ಸುಧಾಕರ್ ಅವರೇ, ನಿಮ್ಮ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ. ಜನ ಮತ್ತೊಮ್ಮೆ ಹಾದಿಬೀದಿಯಲ್ಲಿ ಸಾಯಲಿ ಎಂದು ಬಯಸುತ್ತಿರುವಿರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರು ಸೇರಿಕೊಂಡಿರುವ ಕೂಟಕ್ಕೆ ಇರುವ ಹೆಸರೇ – ಬಿಜೆಪಿ. ಬೇಟಿ ಬಚಾವ್ ಆಗಬೇಕಿರುವುದು ಬಿಜೆಪಿಗರಿಂದ ಎಂಬುದು ಕರ್ನಾಟಕದಿಂದ, ಉತ್ತರ ಪ್ರದೇಶ, ಉತ್ತರಖಾಂಡದವರೆಗೂ ಬಿಜೆಪಿಗರು ನಿರೂಪಿಸಿದ್ದಾರೆ. ಹೆಣ್ಣುಮಕ್ಕಳನ್ನು ಪೀಡಿಸುವ ಬಿಜೆಪಿಗೆ ಕೀಚಕ, ದುಶ್ಯಾಸನರು ಆದರ್ಶ ಪುರುಷರೇ ಹೊರತು ರಾಮನಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.