ಸುಂದರರ ಹೇಳಿಕೆ, ಕ್ಷೇತ್ರದ ಆರೆಸ್ಸೆಸ್, ಬಿಜೆಪಿ ಮುಖಂಡರನ್ನು ತನಿಖೆಗೊಳಪಡಿಸಬೇಕು : ಮಂಜೇಶ್ವರ SDPI ಆಗ್ರಹ

Prasthutha|

ಮಂಜೇಶ್ವರ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಸುಂದರರ ಹೇಳಿಕೆ, ಕ್ಷೇತ್ರದ ಆರೆಸ್ಸೆಸ್, ಬಿಜೆಪಿ ಮುಖಂಡರನ್ನು ತನಿಖೆಗೊಳಪಡಿಸಬೇಕು ಎಂದು SDPI ಆಗ್ರಹಿಸಿದೆ.  

- Advertisement -

ಈ ಕುರಿತು ಪ್ರತಿಕ್ರಿಯಿಸಿದ SDPI ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅನ್ಸಾರ್ ಹೊಸಂಗಡಿ, ವಿಧಾನಸಭಾ ಚುನಾವಣೆ ಫಲವನ್ನು ಬುಡಮೇಲುಗೊಳಿಸಲು ಬಿಜೆಪಿಯು ರಾಜ್ಯದಲ್ಲಿ ಕೋಟಿಗಟ್ಟಲೆ ಕಪ್ಪುಹಣದ ವ್ಯವಹಾರ ನಡೆಸಿದ್ದಾರೆಂಬ ಪ್ರಕರಣದಲ್ಲಿ ಮಂಜೇಶ್ವರದ ಬಿಎಸ್ಪಿ ಅಭ್ಯರ್ಥಿಯ ಹೇಳಿಕೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

 ಬಿಎಸ್ಪಿ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿಯಲು 2.5 ಲಕ್ಷ ಹಾಗೂ ಬೆಲೆ ಬಾಳುವ ಮೊಬೈಲ್ ಫೋನ್ ನೀಡಿದ್ದರು.ಬಿಜೆಪಿಯ ಸುರೇಂದ್ರನ್ ಗೆಲ್ಲುವುದಾದರೆ ಮಂಗಳೂರಿನಲ್ಲಿ ವೈನ್ ಪಾರ್ಲರ್ ಮಾಡಿಕೊಡುವ ಭರವಸೆಯನ್ನೂ ನೀಡಲಾಗಿತ್ತು. ಚುನಾವಣಾ ಕಣದಿಂದ ಹಿಂದೆ ಸರಿಯಲು ಬಿಜೆಪಿ ನಾಯಕರು ಒತ್ತಡ ಹಾಕಿದರೆಂದೂ ಬಿಜೆಪಿ ಮಂಜೇಶ್ವರ ಕ್ಷೇತ್ರದ ನಾಯಕರು ಹಣ ನೀಡಿದವರು ಎಂದೂ ರಹಸ್ಯ ಬಹಿರಂಗ ಪಡಿಸಿದ ಹಿನ್ನಲೆಯಲ್ಲಿ ಅಭ್ಯರ್ಥಿ ಸುರೇಂದ್ರನ್, ಬಿಜೆಪಿ ಮಂಜೆಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸೇರಿದಂತೆ ಉಳಿದ ಮುಖಂಡರನ್ನು ಪ್ರಕರಣದ ತನಿಖೆಯಲ್ಲಿ ಒಳಪಡಿಸಬೇಕೆಂದೂ ಕರ್ನಾಟಕದ RSS ನಾಯಕರು ನಡೆಸಿದ ಹಣ ವ್ಯವಹಾರದ ಭಾಗೀದಾರಿಕೆಯಲ್ಲಿ ಪ್ರಾದೇಶಿಕ ನಾಯಕರುಗಳ ದೂರವಾಣಿ ಕರೆಗಳ ತುಣುಕುಗಳನ್ನು ತನಿಖೆಯ ಪರಿಧಿಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ವೇಳೆ SDPI ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮುಬಾರಕ್ ಕಡಂಬಾರ್ ಮುಂತಾದವರು ಉಪಸ್ಥಿತರಿದ್ದರು.

Join Whatsapp