ಅಂಬಾನಿ ಮನೆ ಸಮೀಪ ಸ್ಪೋಟಕ ಪತ್ತೆ ಪ್ರಕರಣ | ಹಿರೇನ್‌ ಶವ ಪತ್ತೆಯಾದ ಸ್ಥಳದಲ್ಲೇ ಮತ್ತೊಂದು ಮೃತದೇಹ ಪತ್ತೆ!

Prasthutha|

ಠಾಣೆ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈಯ ಮನೆಯ ಸಮೀಪ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬ್ರಾದ ರೇತಿಬಂದರ್ ಪ್ರದೇಶದಲ್ಲಿ ಉದ್ಯಮಿ ಮನ್‌ಸುಖ್‌ ಹಿರೇನ್‌ ಮೃತದೇಹ ಪತ್ತೆಯಾದ ಸ್ಥಳದಲ್ಲಿಯೇ ಮತ್ತೊಂದು ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಮುಂಬೈ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಈ ಮೃತದೇಹವನ್ನು ಸ್ಥಳೀಯ ನಿವಾಸಿ ಶೇಖ್ ಸಲೀಮ್ ಅಬ್ದುಲ್ (48) ಎಂಬವರದ್ದು ಎಂದು ಪೊಲೀಸರು ಗುರುತಿಸಿದ್ದಾರೆ.  ಅಂಬಾನಿ ನಿವಾಸದ ಮುಂದೆ ಪತ್ತೆಯಾದ ಸ್ಫೋಟಕಗಳಿದ್ದ ಸ್ಕಾರ್ಪಿಯೊ ತಮ್ಮದು ಎಂದು ಠಾಣೆ ಮೂಲದ ಉದ್ಯಮಿ ಮನ್‌ಸುಖ್‌ ಹಿರೇನ್‌ (45) ಹೇಳಿಕೊಂಡಿದ್ದರು.  ಫೆ.18ರಂದು ಐರೋಲಿ-ಮುಲುಂದ್‌ ಸೇತುವೆ ಬಳಿಯಿಂದ ತಮ್ಮ ಸ್ಕಾರ್ಪಿಯೊ ಕಳುವಾಗಿತ್ತು ಎಂದು ಪೊಲೀಸರಿಗೆ ದೂರು ನೀಡಿದ ಕೆಲವೇ ದಿನಗಳಲ್ಲಿ  ಉದ್ಯಮಿ ಹಿರೇನ್ ಅವರ ಮೃತ ದೇಹ ಪತ್ತೆಯಾಗಿತ್ತು.

ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಈಗಾಗಲೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -