ಶ್ರೀಲಂಕಾ ಪ್ರವಾಸಕ್ಕಾಗಿ ಭಾರತೀಯ ವಾಯು ಮಾರ್ಗ ಬಳಸಲು ಪಾಕ್ ಪ್ರಧಾನಿಗೆ ಭಾರತ ಅನುಮತಿ!

Prasthutha|

ಹೊಸದಿಲ್ಲಿ : ಪಾಕಿಸ್ಥಾನದ ಪ್ರಧಾನಿ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತೀಯ ವಾಯು ಮಾರ್ಗವನ್ನು ಬಳಸಲಿದ್ದಾರೆ. ಭಾರತದ ಪರವಾನಿಗೆ ಹೊಂದಿರುವ ವಾಯು ಮಾರ್ಗ ಶ್ರೀಲಂಕಾ ಪ್ರವಾಸಕ್ಕಾಗಿ ಬಳಸಿಕೊಳ್ಳಲು ಅನುಮತಿಸಬೇಕು ಎಂದು ಪಾಕಿಸ್ಥಾನ ಭಾರತ ಸರ್ಕಾರವನ್ನು ಕೋರಿತ್ತು. ಸೋಮವಾರ(ಫೆ.22) ಭಾರತ ಸರ್ಕಾರ ಈ ಕೋರಿಕೆಗೆ ಅನುಮತಿ ನೀಡಿದೆ.

- Advertisement -

ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಇಂದಿನಿಂದ(ಫೆ.23) ಎರಡು ದಿನಗಳ ಕಾಲ ಶ್ರೀಲಂಕಾ ಪ್ರವಾಸದಲ್ಲಿದ್ದು, ಅಫ್ಘಾನಿಸ್ಥಾನದ ಭೇಟಿಯ ಕೆಲವು ತಿಂಗಳುಗಳ ನಂತರ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಎರಡನೇ ಪ್ರವಾಸ ಇದಾಗಿದೆ.

ಪ್ರೋಟೋಕಾಲ್ ಪ್ರಕಾರ, ಬೇರೆ ಯಾವುದೇ ದೇಶದ ಪ್ರಮುಖರು ಭಾರತೀಯ ವಾಯು ಮಾರ್ಗದ ಮೂಲಕ ಪ್ರಯಾಣಿಸುವಾಗ ಆ ದೇಶಕ್ಕೆ ಎಚ್ಚರಿಕೆಯನ್ನು ನೀಡಲಾಗುತ್ತದೆ. ಇಸ್ಲಾಮಾಬಾದ್ ನಿಂದ ಹತ್ತು ದಿನಗಳ ಹಿಂದೆ ನವ ದೆಹಲಿಗೆ ಅನುಮತಿ ಕೋರಿ ಪತ್ರವನ್ನು ಕಳುಹಿಸಲಾಗಿತ್ತು ಎಂದು ವರ್ಲ್ಡ್ ಈಸ್ ಒನ್ ನ್ಯೂಸ್ (WION) ಸಂಸ್ಥೆ ವರದಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದ ನಂತರ ಪಾಕಿಸ್ಥಾನ ಸರ್ಕಾರ, ಒಂದು ಭಾರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಎರಡು ಭಾರಿ ಪ್ರಧಾನಿ ಮೋದಿಯವರ ಅತಿಯಾದ ವಿಮಾನ ಹಾರಾಟಕ್ಕೆ ಅನುಮತಿ ನೀಡಿರಲಿಲ್ಲ.

- Advertisement -

 2019ರ ಸಪ್ಟೆಂಬರ್ ನಲ್ಲಿ ರಾಷ್ಟ್ರಪತಿ ಕೋವಿಂದ್ ಅವರ ಯೂರೋಪ್ ಪ್ರವಾಸದ ಸಂದರ್ಭದಲ್ಲಿ ಪಾಕಿಸ್ಥಾನದ ವಾಯುನೆಲೆಯಲ್ಲಿ ಅನುಮತಿಯನ್ನು ನಿರಾಕರಿಸಿತ್ತು. ಯು ಎನ್ ಜಿ ಎ ಅಧಿವೇಶನಕ್ಕೆ ತೆರಳಲು ಪ್ರಧಾನಿ ಮೋದಿಯವರ ವಿಮಾನ ಹಾರಾಟಕ್ಕೂ ಅನುಮತಿಯನ್ನು ನೀಡಿರಲಿಲ್ಲ. ಮತ್ತು ಏರ್ ಇಂಡಿಯಾ ಒನ್ ಗೆ ಮೋದಿಯವರು ಅಕ್ಟೋಬರ್ 2019ರಲ್ಲಿ ಸೌದಿ ಅರೇಬಿಯಾ ಪ್ರವಾಸದ ಸಂದರ್ಭದಲ್ಲೂ ಅನುಮತಿಯನ್ನು ನೀಡಿರಲಿಲ್ಲ.

Join Whatsapp