ಲಕ್ಷದ್ವೀಪ ಜನರಿಗೆ ಮಾಹಿತಿ ನೀಡದೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ ಕೇಂದ್ರ ಸರ್ಕಾರ!

Prasthutha|

ಕೊಚ್ಚಿ :  ದ್ವೀಪ ನಿವಾಸಿಗಳಿಗೆ ಮಾಹಿತಿ ನೀಡದೆ ಖಾಸಗಿ ವ್ಯಕ್ತಿಗಳ ಭೂಸ್ವಾಧೀನ ಪ್ರಕ್ರಿಯೆಗೆ ಲಕ್ಷದ್ವೀಪದಲ್ಲಿ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಕಂದಾಯ ಇಲಾಖೆ ಕವರಟ್ಟಿಯಲ್ಲಿ 20ಕ್ಕೂ ಹೆಚ್ಚು ಕುಟುಂಬಗಳ ಭೂಮಿ ಸ್ವಾಧೀನಕ್ಕೆ ಹಸಿರು ನಿಶಾನೆ ತೋರಿಸಿದ್ದು, ಯಾಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ದ್ವೀಪ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ಆದರೆ ಲಕ್ಷದ್ವೀಪದ ಅಭಿವೃದ್ಧಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರವು ಈ ಹಿಂದೆ ದೊಡ್ಡ ಪ್ರಮಾಣದ ಭೂ ಸ್ವಾಧೀನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಳಗೊಂಡ ಕರಡು ಕಾನೂನನ್ನು ಹೊರಡಿಸಿತ್ತು.

ಈ ಹಿಂದೆ ಪ್ರಫುಲ್ ಪಟೇಲ್ ಅವರು ತಮ್ಮ ಆಡಳಿತ ಸುಧಾರಣೆಗಳ ಅನುಷ್ಠಾನವನ್ನು ತ್ವರಿತಗೊಳಿಸದ ಅಧಿಕಾರಿಗಳನ್ನು ಟೀಕಿಸಿದ್ದ ಕಾರಣ ಕಂದಾಯ ಇಲಾಖೆ ಭೂಸ್ವಾಧೀನವನ್ನು ತ್ವರಿತಗೊಳಿಸಿದೆ ಎನ್ನಲಾಗಿದೆ.



Join Whatsapp