ಮಧ್ಯಪ್ರದೇಶದಲ್ಲಿ ವಿಷಕಾರಿ ಮದ್ಯ ದುರಂತ: 11 ಬಲಿ

Prasthutha|

- Advertisement -

ಮಧ್ಯಪ್ರದೇಶದ ಮೊರೀನಾ ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವಿಸಿ 11 ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಾದ ಏಳು ಜನರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸುಜನ್ಯಾ ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಗ್ವಾಲಿಯರ್‌ಗೆ ಸ್ಥಳಾಂತರಿಸಲಾಗುವುದೆಂದು ವರದಿಯಾಗಿದೆ. ಮೊರೀನಾ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಪಹವಳ್ಳಿ ಗ್ರಾಮದಲ್ಲಿ ನಾಲ್ಕು ಜನರು ಮತ್ತು ಮನ್ಪುರ್ ಗ್ರಾಮದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ.

ಗ್ರಾಮಸ್ಥರು ಬಿಳಿ ಬಣ್ಣದ ವಿಷಕಾರಿ ಮದ್ಯ ಸೇವಿಸಿದ್ದಾರೆಂದು ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ. “ಮನ್ಪುರ್ ಮತ್ತು ಪಹವಳ್ಳಿ ಗ್ರಾಮಗಳ 11 ಜನರು ವಿಷಕಾರಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ”ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ.   

Join Whatsapp