ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ : ಸುಪ್ರೀಂ ಕೋರ್ಟ್ ಆದೇಶ

Prasthutha|

ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಮೂರು ವಿವಾದಾತ್ಮಕ ಕಾಯ್ದೆಗಳಿಗೆ ಮುಂದಿನ ಆದೇಶದ ವರೆಗೂ ಕೋರ್ಟ್ ತಡೆ ನೀಡಿದೆ.

- Advertisement -

ಮಸೂದೆಗಳಿಗೆ ತಡೆ ನೀಡಿರುವುದಲ್ಲದೆ, ಮಸೂದೆ ಕುರಿತ ಅಧ್ಯಯನಕ್ಕೆ ಸಮಿತಿಯೊಂದನ್ನೂ ಕೋರ್ಟ್ ಘೋಷಿಸಿದೆ. ಎಚ್.ಎಸ್. ಮಾನ್, ಪ್ರಮೋದ್ ಕುಮಾರ್ ಜೋಶಿ, ಅಶೋಕ್ ಗುಲಾಟಿ ಹಾಗೂ ಅನಿಲ್ ಧಾವಂತ್ ಸೇರಿದಂತೆ ನಾಲ್ಕು ಮಂದಿ ಕೃಷಿ ತಜ್ಞರನ್ನೊಳಗೊಂಡ ಸಮಿತಿ ರಚಿಸಿರುವ ನ್ಯಾಯಮೂರ್ತಿಗಳು, ಈ ಸಮಿತಿ ನೂತನ ಕೃಷಿ ಕಾಯ್ದೆಗಳನ್ನು ಅವಲೋಕಿಸಲಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ನಿಷೇಧಿತ ಸಿಖ್ ಸಂಘಟನೆಗಳು ಪ್ರತಿಭಟನೆಯ ಭಾಗವಾಗಿವೆಯೇ? ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ಜ.26ರಂದು ಗಣರಾಜ್ಯೋತ್ಸವದ ದಿನ ರೈತರು ಟ್ರಾಕ್ಟರ್ ಮೂಲಕ ದೆಹಲಿ ಪ್ರವೇಶಿದಂತೆ ತಡೆಯಲು ದೆಹಲಿ ಪೊಲೀಸರಿಗೆ ಸೂಚನೆ ನೀಡಲಾಗಿದೆ.  

Join Whatsapp