ಬ್ಯಾಂಕಾಕ್ ನಲ್ಲಿ ತುರ್ತು ಪರಿಸ್ಥಿತಿ

Prasthutha|


ಬ್ಯಾಂಕಾಕ್ : ಸರಕಾರ ವಿರೋಧಿ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಬ್ಯಾಂಕಾಕ್ ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಐದಕ್ಕೂ ಹೆಚ್ಚು ಜನರು ಒಟ್ಟು ಸೇರುವುದನ್ನು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಸುದ್ದಿಗಳು ಮತ್ತು ಆನ್‌ಲೈನ್ ಸಂದೇಶಗಳಿಗೂ ನಿರ್ಬಂಧ ಹೇರಲಾಗಿದೆ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.

- Advertisement -


ಥೈಲ್ಯಾಂಡ್ ನಲ್ಲಿ ತಿಂಗಳುಗಳಿಂದ ಸರಕಾರ ವಿರೋಧಿ ಪ್ರತಿಭಟನೆಗಳು ಉಲ್ಬಣಗೊಳ್ಳುತ್ತಿದೆ. ಪ್ರಧಾನಿ ಪ್ರಯತ್-ಚನ್-ಒ-ಚ ರವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆಗೆ ನೇತೃತ್ವ ನೀಡುತ್ತಿದೆ. 2014 ರ ದಂಗೆಯ ಹಿನ್ನೆಲೆಯಲ್ಲಿ ಪ್ರಧಾನಿ ಪ್ರಯತ್ ಚನ್ ಅಧಿಕಾರಕ್ಕೆ ಬಂದಿದ್ದರು. ಬುಧವಾರದಂದು ಬ್ಯಾಂಕಾಕ್ ನಲ್ಲಿ ಸುಮಾರು ಹತ್ತುಸಾವಿರ ಜನರ ಪ್ರತಿಭಟನಾ ರ್ಯಾ ಲಿ ನಡೆದಿತ್ತು.

Join Whatsapp