ಗ್ರೀಕ್: ನವ ನಾಝಿ ಪಕ್ಷದ ನಾಯಕನಿಗೆ 13 ವರ್ಷ ಜೈಲು

Prasthutha: October 15, 2020

ರಾಜಕೀಯ ಪಕ್ಷದ ನೆಪದಲ್ಲಿ ಅಪರಾಧಿ ಸಂಘಟನೆಯನ್ನು ನಡೆಸಿದ ಆರೋಪದಲ್ಲಿ ನವ ನಾಝಿ ಸಂಘಟನೆ ಗೋಲ್ಡನ್ ಡಾನ್ ನ ನಾಯಕ ನಿಕೊಸ್ ಮಕಲೊಲಿಯಕಸ್ ನಿಗೆ ಗ್ರೀಕ್ ನ್ಯಾಯಾಲಯವೊಂದು 13 ವರ್ಷಗಳ ಜೈಲು ಶಿಕ್ಷೆಯನ್ನ್ವು ವಿಧಿಸಿದೆ.

ಇತರ ಆರು ಮಂದಿ ಹಿರಿಯ ಸದಸ್ಯರಿಗೆ 10ರಿಂದ 13 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 11 ಮಂದಿ ಮಾಜಿ ಗೋಲ್ಡನ್ ಡಾನ್ ಸಂಸದರಿಗೆ 5 ರಿಂದ 7 ವರ್ಷಗಳ ಸಜೆಯನ್ನು ವಿಧಿಸಲಾಗಿದೆ.

ವಲಸಿಗರು ಮತ್ತು ಎಡ ರಂಗ ಕಾರ್ಯಕರ್ತರನ್ನು ಗುರಿಯಾಗಿಸಿ ಹಲವು ಹಿಂಸಾತ್ಮಕ ದಾಳಿಗಳನ್ನು ನಡೆಸಿದ ಆರೋಪ ಗೋಲ್ಡನ್ ಡಾನ್ ಮೇಲಿದೆ.

ಐದು ವರ್ಷಗಳ ವಿಚಾರಣೆಯ ಬಳಿಕ ಅಕ್ರಮ ಶಸ್ತ್ರಾಸ್ತ್ರ ಸ್ವಾಧೀನ, ಹತ್ಯೆ ಮತ್ತು ದಾಳಿಗಳ 50 ಆರೋಪಿಗಳ ವಿರುದ್ಧದ ಪ್ರಕರಣವು ಕೊನೆಗೊಂಡಿದೆ. ವಿಚಾರಣೆಯು ಗ್ರೀಕ್ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.

ಗೋಲ್ಡನ್ ಡಾನ್ ಸಂಘಟನೆಯ ಯಾವುದೇ ಪ್ರಮುಖ ಸದಸ್ಯರು ವಿಚಾರಣೆಯಲ್ಲಿ ಪಾಲ್ಗೊಂಡಿರಲಿಲ್ಲ. ಗೋಲ್ಡನ್ ಡಾನ್ ಸಂಘಟನೆಯ ಸದಸ್ಯನೊಬ್ಬ ಫ್ಯಾಶಿಸ್ಟ್ ವಿರೋಧಿ ಹೋರಾಟಗಾರ ಪೌಲಸ್ ಫಿಸಸ್ ರನ್ನು ಹತ್ಯೆ ಮಾಡಿದ ಬಳಿಕ 2013 ರಲ್ಲಿ ಈ ಉಗ್ರ ಪಕ್ಷದ ನಾಯಕನನ್ನು ಬಂಧಿಸಲಾಗಿತ್ತು. ಇದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು.ಇದರಿಂದ ಸರಕಾರ ಪಕ್ಷದ ವಿರುದ್ಧ ಕ್ರಮವನ್ನು ಆರಂಭಿಸಿತ್ತು. ಪೌಲಸ್ ಹತ್ಯಾ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ