ಬನ್ನೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗಣರಾಜ್ಯ ರಕ್ಷಿಸಿ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಕ್ರೀಡಾಕೂಟ

Prasthutha|

ಪುತ್ತೂರು: ಬನ್ನೂರು ಸ್ಪೋರ್ಟ್ಸ್ ಕ್ಲಬ್ ಬನ್ನೂರು ವತಿಯಿಂದ ಗಣರಾಜ್ಯ ರಕ್ಷಿಸಿ ಕಾರ್ಯಕ್ರಮ ಅಂಗವಾಗಿ ಸಾರ್ವಜನಿಕ ಕ್ರೀಡಾಕೂಟವು ಬನ್ನೂರು ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬನ್ನೂರು ಸ್ಪೋರ್ಟ್ಸ್ ಕ್ಲಬ್ ಸಂಚಾಲಕರಾದ ರಫೀಕ್ ಬಾಂಬೆ ವಹಿಸಿದರು.

- Advertisement -

ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕರವರು ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯದಲ್ಲಿದೆ. ಹೋರಾಟಗಾರರನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ. ಸಂವಿಧಾನವನ್ನು ಉಳಿಸಲು ದೇಶದ ಪ್ರಜ್ಞಾವಂತ ನಾಗರಿಕರು ತಯಾರಾಗಬೇಕಾಗಿದೆ. ಇದಕ್ಕಾಗಿ ಸಂಘಟನೆ, ಜಾತಿ, ಧರ್ಮ ಪಂಗಡಗಳನ್ನು ಬದಿಗಿಟ್ಟು ಉತ್ತಮ ಸೌಹಾರ್ದತೆಯ ಭಾರತದ ನಿರ್ಮಾಣಕ್ಕಾಗಿ ಕಟಿಬಧ್ಧರಾಗಬೇಕಿದೆ. ಇಸ್ಲಾಮಿನಲ್ಲಿ ಆರೋಗ್ಯಕ್ಕೆ ಮಹತ್ತರವಾದ ಸ್ಥಾನವಿದೆ. ಯುವತ್ವದ ಸಮಯದಲ್ಲಿ ದುಶ್ಚಟಗಳಿಂದ ದೂರವಾಗಿ ಉತ್ತಮ ಆರೋಗ್ಯವಂತ ಶರೀರವನ್ನು ಬೆಳೆಸಿ, ಪ್ರತಿನಿತ್ಯ ಕ್ರೀಡೆ ಹಾಗೂ ದೈಹಿಕ ವ್ಯಾಯಾಮಗಳನ್ನು ನಡೆಸಿಕೊಂಡು ರೋಗಗಳಿಂದ ಮುಕ್ತವಾಗಲು ಸಾಧ್ಯ ಎಂದರು.

ಕ್ರೀಡಾ ಕೂಟದಲ್ಲಿ ಕ್ರಿಕೆಟ್, ಹಗ್ಗ ಜಗ್ಗಾಟ ಪಂದ್ಯಗಳನ್ನು ನಡೆಸಲಾಯಿತು. ಒಟ್ಟು 10 ತಂಡಗಳು ಭಾಗವಹಿಸಿತು. ಪುಟಾಣಿ ಮಕ್ಕಳಿಗೆ ಓಟದ ಸ್ಪರ್ಧೆ ನಡೆಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕ್ರೀಡೆಯಲ್ಲಿ ವಿಜಯಿಯಾದ ಸ್ಪರ್ಧಿಗಳಿಗೆ ಬಹುಮಾನ ವಿತರಣೆಯನ್ನು ನೀಡಲಾಯಿತು.

- Advertisement -

ಈ ಸಂದರ್ಭದಲ್ಲಿ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಬದ್ರಿಯಾ ಜುಮಾ ಮಸ್ಜಿದ್ ಬನ್ನೂರು ಮಾಜಿ ಅಧ್ಯಕ್ಷರಾದ ಮೊಹ್ಯುದ್ದೀನ್ ಹಾಜಿ, ನಿಝಾಂ ಹಾರಾಡಿ, ಮೊಹಮ್ಮದ್ ಹುಸೇನ್, ಜಾಕಿ ಜಾಸ್ಮೀನ್, ಅಝರ್ ಬನ್ನೂರು ಹಿರಿಯರಾದ ಇಬ್ರಾಹಿಂ ಕರ್ಮಲ, ಯುಸೂಫ್ ಕರ್ಮಲ, ಸುಲೈಮಾನ್ ಬನ್ನೂರು, ರಶೀದ್ ಅಕ್ಕರೆ, ಹನೀಫ್ ಅಕ್ಕರೆ, ಅಸ್ಫರ್ ಅಕ್ಕರೆ ಮೊದಲಾದವರು ಉಪಸ್ಥಿತರಿದ್ದರು.

Join Whatsapp