PFI ವಿರುದ್ಧ ಟ್ವೀಟಾಕ್ರಮಣ : ಫ್ಯಾಶಿಸ್ಟ್ ಟ್ರೆಂಡಿಗೆ ಪ್ರತಿರೋಧವೊಡ್ಡಿದ ನೆಟ್ಟಿಗರು

Prasthutha|

ಬೆಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಸೇಡಿನ ರಾಜಕೀಯದ ಭಾಗವಾಗಿ BANPFI (ಪಿ.ಎಫ್.ಐ ನಿಷೇಧಿಸಿ) ಟ್ರೆಂಡಿಂಗ್ ಸೃಷ್ಟಿಸಲು ಹೊರಟ ಹಿಂದುತ್ವ ಟ್ರೋಲ್ ಬ್ರಿಗೇಡ್ ಟ್ವಿಟ್ಟರ್ ನಲ್ಲಿ ಮುಖಭಂಗ ಅನುಭವಿಸಿದ ಘಟನೆ ನಿನ್ನೆ ನಡೆದಿದೆ.

- Advertisement -

ಮಧ್ಯಾಹ್ನದ ವೇಳೆ ಟ್ವಿಟ್ಟರ್ ನಲ್ಲಿ ಸಂಘಪರಿವಾರ ಪ್ರೇರಿತ ವ್ಯಕ್ತಿಗಳು BANPFI ಎಂಬ ಅಭಿಯಾನವನ್ನು ಆರಂಭಿಸಿದ್ದು, ಸಂಜೆಯ ವೇಳೆಗೆ ಅದು ದೇಶದ ನಂಬರ್ ವನ್ ಟ್ರೆಂಡಿಂಗ್ ಆಗಿತ್ತು. ಈ ವೇಳೆ ಪಾಪ್ಯುಲರ್ ಫ್ರಂಟ್ ಪರವಾಗಿ ಬೆಂಬಲಿಗರು ಮತ್ತು ಹಿತೈಷಿಗಳು ದೇಶಾದ್ಯಂತ ಟ್ವೀಟ್ ಗಳ ಪ್ರವಾಹವನ್ನು ಹರಿಸಿದ್ದರು.

IndiaWithPFI, StandWithPFI, WeWithPFI ಹ್ಯಾಶ್ ಟ್ಯಾಗ್ ಗಳೊಂದಿಗೆ ಪಾಪ್ಯುಲರ್ ಫ್ರಂಟ್ ನ ಸಾಮಾಜಿಕ ಸೇವೆ, ಕೊರೋನಾ ಬಿಕ್ಕಟ್ಟು ಹಾಗೂ ನೆರೆ, ಭೂಕುಸಿತದಂತಹ ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ನಡೆಸಿದ ಪರಿಹಾರ ಕಾರ್ಯಗಳು, ಅಲ್ಪಸಂಖ್ಯಾತರು ಮತ್ತು ಶೋಷಿತರಿಗಾಗಿ ಸಂಘಟನೆ ನಡೆಸುತ್ತಿರುವ ಹೋರಾಟಗಳ ಫೋಟೊ, ವೀಡಿಯೊ ಮತ್ತು ಅವುಗಳನ್ನು ಬೆಂಬಲಿಸಿದ ಬರಹಗಳ ಪ್ರವಾಹವೇ ಟ್ವಿಟ್ಟರ್ ನಲ್ಲಿ ಹರಿದು ಬರತೊಡಗಿತ್ತು.

- Advertisement -

ಕೆಲವೇ ಗಂಟೆಗಳೊಳಗಾಗಿ ರಾತ್ರಿಯ ವೇಳೆಗಾಗುವಾಗ IndiaWithPFI ದೇಶದ ನಂಬರ್ 1 ಟ್ರೆಂಡಿಂಗ್ ಆಗಿದ್ದು, 1 ಲಕ್ಷ 48 ಸಾವಿರ ಬಾರಿ ಟ್ವೀಟ್ ಗೊಳಗಾಗಿತ್ತು.

ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, “ಶ್ರೀವಾಸ್ತವ ಗ್ರೂಪ್ ನ ಸಿಬ್ಬಂದಿಗಳು ನಮ್ಮ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ ಎಂದು ತಿಳಿಯಲು ಖುಷಿಯಾಗುತ್ತಿದೆ. ಇಂತಹ ವಿರೋಧಿ ಅಭಿಯಾನಗಳು ಹೆಚ್ಚಿದಂತೆ ನಾವು ಒಳ್ಳೆಯದ್ದನ್ನೇ ಮಾಡುತ್ತಿದ್ದೇವೆ ಎಂಬ ಅನುಭವ ನಮಗಾಗುತ್ತಿದೆ… ಫ್ಯಾಶಿಸ್ಟರು ನಮ್ಮನ್ನು ಹೊಗಳಿದರೆ ಆಗ ನಾವು ಗಂಭೀರವಾಗಿ ಕಳವಳಪಡಬೇಕಾಗುತ್ತದೆ…ಹಮ್ ದೇಖೇಂಗೆ” ಎಂದು ಟ್ವೀಟಿಸಿದ್ದರು.

ಶ್ರೀವಾಸ್ತವ ಗ್ರೂಪ್ ಸಂಘಪರಿವಾರ, ನರೇಂದ್ರ ಮೋದಿ ಮತ್ತು ಬಿಜೆಪಿಗಾಗಿ ಟ್ರೆಂಡಿಂಗ್ ಗಳನ್ನು ಸೃಷ್ಟಿಸುವ, ನಕಲಿ ವೆಬ್ ಸೈಟ್, ಬ್ಲಾಗ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಗಳನ್ನು ಸೃಷ್ಟಿಸಿದಕ್ಕಾಗಿ ಕುಖ್ಯಾತಿಯನ್ನು ಪಡೆದ ಸಂಸ್ಥೆಯಾಗಿದೆ. ಈ ಹಿಂದೆ EU DisinfoLab ಎಂಬ ಬ್ರಸೆಲ್ ಮೂಲದ ಎನ್.ಜಿ.ಒ ಭಾರತದ ತಪ್ಪು ಮಾಹಿತಿ ನೀಡುವ ಅಭಿಯಾನ (Disinformation)ದ ಕುರಿತು ವರದಿಯೊಂದನ್ನು ಹೊರತಂದಿತ್ತು. ಶ್ರೀವಾಸ್ತವ ಗ್ರೂಪ್ ಮತ್ತು ಏಶ್ಯನ್ ನ್ಯೂಸ್ ಇಂಟರ್ ನ್ಯಾಶನಲ್  ನರೇಂದ್ರ ಮೋದಿ ಸರಕಾರದ ಹಿತಾಸಕ್ತಿಯ ಪರವಾಗಿ ಜಗತ್ತಿನಾದ್ಯಂತ ತಪ್ಪು ಮಾಹಿತಿಗಳನ್ನು ಹರಡುವ ಅಭಿಯಾನಗಳನ್ನು ನಡೆಸುತ್ತಿದೆ ಎಂಬುದಾಗಿ ವರದಿಯು ಬಹಿರಂಗಪಡಿಸಿತ್ತು. 265 ನಕಲಿ ನ್ಯೂಸ್ ಸೈಟ್ ಗಳನ್ನು 60 ರಾಷ್ಟ್ರಗಳಲ್ಲಿ ಶ್ರೀವಾಸ್ತವ್ ಗ್ರೂಪ್ ನಡೆಸುತ್ತಿದೆ ಎಂದು DisinfoLab ಶೋಧಿಸಿತ್ತು.

Join Whatsapp