ದೇವರ ಹೆಸರಿನಲ್ಲಿ ಬೀಫ್ ಸ್ಟಾಲ್; ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

Prasthutha|

- Advertisement -

 ಗೋವು ಮತ್ತು ಹಲಾಲ್ ಹೆಸರಿನಲ್ಲಿ ಸಂಘಪರಿವಾರ ಮತ್ತು ಬಿಜೆಪಿಯು ಸಮಾಜವನ್ನು ವಿಭಜಿಸುತ್ತಿರುವುದರ ನಡುವೆ ಶ್ರೀ ಕೃಷ್ಣ ಬೀಫ್ ಸ್ಟಾಲ್ ಎಂಬ ಕಸಾಯಿಖಾನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಅಲೆಗಳನ್ನು ಎಬ್ಬಿಸಿದೆ. ತಮಿಳುನಾಡಿನಲ್ಲಿ ಕೆ.ಕಣ್ಣನ್ ಎಂಬವರ ಒಡೆತನದ ಬೀಫ್ ಸ್ಟಾಲ್ ಈಗ ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿದೆ. ‘ಇಲ್ಲಿ ಹಲಾಲ್ ಮಾಂಸ ದೊರೆಯುತ್ತದೆ’ ಎಂಬ ಜಾಹೀರಾತು ಹೊಂದಿರುವ ಅಂಗಡಿಯ ಫಲಕ ಕುತೂಹಲ ಕೆರಳಿಸಿದೆ.

ದೇಶದಾದ್ಯಂತ ‘ಹಲಾಲ್’ ಭಕ್ಷ್ಯಗಳ ವಿರುದ್ಧದ ಅಭಿಯಾನವನ್ನು ನಡೆಸಲು ಸಂಘಪರಿವಾರ ಪ್ರೇರಿತ ಶಕ್ತಿಗಳು ಪ್ರಯತ್ನಿಸುತ್ತಿರುವುದರ ನಡುವೆ ದಕ್ಷಿಣ ಭಾರತದಲ್ಲಿ ಆಹಾರ ವೈವಿಧ್ಯತೆ ಮತ್ತು ಸ್ನೇಹಪರತೆಗೆ ಸಾಕ್ಷಿಯಾಗಿರುವ ಅಂಗಡಿಯ ಚಿತ್ರವೊಂದು ಭಾರೀ ಪ್ರಚಾರ ಪಡೆದಿದೆ.

- Advertisement -
https://twitter.com/Saumya_miishra/status/1348885739556139010

ಬೀಫ್ ಸ್ಟಾಲ್‌ನ ಫಲಕದಲ್ಲಿ ಕ್ರಿಶ್ಚಿಯನ್, ಹಿಂದೂ ಮತ್ತು ಮುಸ್ಲಿಮರನ್ನು ಪ್ರತಿನಿಧಿಸುವ ಫೋಟೋಗಳು ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂಜಿಆರ್ ಮತ್ತು ಜಯಲಲಿತಾ ಅವರ ಭಾವಚಿತ್ರಗಳಿವೆ. ತಮಿಳು ಮತ್ತು ಇಂಗ್ಲಿಷ್ ನಲ್ಲಿ ಬರೆದ ‘ಶ್ರೀಕೃಷ್ಣ ಬೀಫ್ ಸ್ಟಾಲ್’ ಎಂಬ ಶೀರ್ಷಿಕೆಯ ಕೆಳಗೆ ‘ನಮ್ಮಲ್ಲಿ ಹಲಾಲ್ ಮಾಡಿದ ಗೋಮಾಂಸ ದೊರೆಯುತ್ತದೆ’ ಎಂದು ತಮಿಳಿನಲ್ಲಿ ಬರೆಯಲಾಗಿದೆ. ಫಲಕದಲ್ಲಿ ಎರಡು ಎತ್ತಿನ ಚಿತ್ರಗಳನ್ನು ಸಹ ಹಾಕಲಾಗಿದೆ.

‘ಕಾಂಗ್ ಲೇಪಾಕ್ ಮಿರರ್’ ಎಂಬ ಫೇಸ್‌ಬುಕ್ ಪುಟದಲ್ಲಿ ಈ ಕಸಾಯಿಖಾನೆಯ ಚಿತ್ರವು ಮೊದಲು ಕಾಣಿಸಿಕೊಂಡಿದ್ದು ನಂತರ ಪಂಚಾರ್ವಾಲಾ, ಗೋಮಾತಾ ದಿ ಹೋಲಿ ಕೌ ಮತ್ತು ಬಾಬಾ ಮಚುವೇರಾ ಸಿಂಗ್‌ ಎಂಬ ಪೇಜ್ ಗಳಲ್ಲೂ ಕಾಣಿಸಿಕೊಂಡಿದೆ.

ಆದರೆ, ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಂಗಡಿಯ ಫಲಕವನ್ನು ತೆಗೆದುಹಾಕಲಾಗಿದೆ ಎಂದು ಹಿಂದೂ ಮಕ್ಕಳ್ ಕಚ್ಚಿ ಹೇಳಿದೆ.



Join Whatsapp