‘ಟ್ರಂಪ್, ಬೈಡನ್ ಮಧ್ಯೆ ವ್ಯತ್ಯಾಸವಿಲ್ಲ’

Prasthutha|

- Advertisement -

ಟೆಹ್ರಾನ್: ಜೋ ಬೈಡನ್ ಅಧಿಕಾರ ವಹಿಸುವುದರೊಂದಿಗೆ ವೈಟ್ ಹೌಸ್ ನಲ್ಲಿ ಬದಲಾವಣೆಗಳುಂಟಾಗಬಹುದೆಂಬ ಊಹಾಪೋಹಗಳನ್ನು ಅಮೆರಿಕಾ ಡ್ರೋನ್ ದಾಳಿಯಲ್ಲಿ ಮೃತರಾದ ಇರಾನ್ ನ ಉನ್ನತ ಭಯೋತ್ಪಾದನೆ ನಿಗ್ರಹ ಕಮಾಂಡರ್ ಕಾಸಿಮ್ ಸುಲೈಮಾನಿ ಅವರ ಪುತ್ರಿ ತಳ್ಳಿಹಾಕಿದ್ದಾರೆ.

“ಟ್ರಂಪ್ ಮತ್ತು ಬೈಡನ್ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಅವರು ಒಂದೇ ರೀತಿಯ ವ್ಯಕ್ತಿಗಳು. ಅವರು ಒಂದೇ ನೀತಿಯನ್ನು ಅನುಸರಿಸುವವರಾಗಿದ್ದಾರೆ. ಅವರ ಮಧ್ಯೆ ವ್ಯತ್ಯಾಸಗಳಿಲ್ಲ. ಟ್ರಂಪ್ ನನ್ನ ತಂದೆಯನ್ನು ಹತ್ಯೆಗೆ ಆದೇಶಿಸಿದರು. ಬೈಡನ್ ಅದನ್ನು ಬೆಂಬಲಿಸಿದರು. ಹಾಗಾಗಿ ಅವರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ” ಎಂದು ಝೈನಬ ಸುಲೈಮಾನಿ ರಶ್ಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

- Advertisement -

“ನಮಗೆ ಸಮಸ್ಯೆಯಿರುವುದು ಅಮೆರಿಕಾದ ನೀತಿಯೊಂದಿಗೆ. ಅದು ಬದಲಾಗುವುದಿಲ್ಲ.. ಮತ್ತು ಅವರಲ್ಲಿ ಪ್ರತಿಯೋರ್ವನೂ ಒಬ್ಬನಿಗಿಂತ ಇನ್ನೊಬ್ಬ ಕೆಟ್ಟವರಾಗಿರುತ್ತಾರೆ” ಎಂದು ಅವರು ಹೇಳಿದರು.

ಸುಲೈಮಾನಿ ಇರಾನ್ ಇಸ್ಲಾಮಿಕ್ ರೆವಲ್ಯೂಶನ್ ಗಾರ್ಡ್ಸ್ ಕಾರ್ಪ್ಸ್ (ಐ.ಆರ್.ಜಿ.ಸಿ) ನ ಮಾಜಿ ಕಮಾಂಡರ್ ಆಗಿದ್ದರು. ಈ ಪ್ರದೇಶದ ಅತ್ಯಂತ ಪರಿಣಾಮಕಾರಿ ಮತ್ತು ಶ್ಲಾಘನೀಯ ಭಯೋತ್ಪಾದನಾ ನಿಗ್ರಹ ಅಧಿಕಾರಿಯೆಂಬ ಹೆಸರನ್ನು ಹೊಂದಿದ್ದರು. ಜನವರಿ 3ರಂದು ಇರಾಕ್ ರಾಜಧಾನಿ ಬಗ್ದಾದ್ ಗೆ ಅಧಿಕೃತ ಭೇಟಿಯಲ್ಲಿದ್ದಾಗ ಅಮೆರಿಕಾ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದರು.



Join Whatsapp